ಬೆಳಗಾವಿ ಜಿಲ್ಲೆಯಲ್ಲಿ ಇಂದು ಶನಿವಾರ (ಮೇ 23) ಮತ್ತೆ ಓರ್ವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ.
ಇಂದಿನ 196 ಹೊಸ ಪ್ರಕರಣಗಳು ಸೇರಿ ಕರ್ನಾಟಕದಲ್ಲಿ ಒಟ್ಟು 1939 ಕ್ಕೆ ಏರಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ ಪ್ರಕಟಣೆಯ ಪ್ರಕಾರ ಪ್ರಕರಣಗಳು ದೃಢಪಟ್ಟಿರುತ್ತದೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಒಟ್ಟು 126 ಪ್ರಕರಣಗಳು ದೃಢಪಟ್ಟಿದ್ದು, 65 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. 60 ಪ್ರಕರಣಗಳು ಸಕ್ರಿಯವಾಗಿವೆ. ಒಬ್ಬರು ಮಹಿಳೆ ಮೃತಪಟ್ಟಿರುತ್ತಾರೆ.
ಜಿಲ್ಲೆ ಸೇರಿದಂತೆ ಬೆಂಗಳೂರು , ಚಿಕ್ಕ ಬಳ್ಳಾಪುರ, ಹಾಸನ, ಉಡುಪಿ, ಗದಗ, ಮಂಡ್ಯ, ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ವಿಜಯಪುರ, ಕೋಲಾರ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದೂ ಕೂಡ ಕೊರೋನಾ ತನ್ನ ಅಟ್ಟಹಾಸ ಮುಂದುವರಿಸಿದೆ.
ಕಳೆದ 4 ದಿನದಿಂದ ಪ್ರತಿದಿನ ನೂರಕ್ಕೂ ಅಧಿಕ ಪೊಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಕರುನಾಡ ಜನರಲ್ಲಿ ಆತಂಕ ಹುಟ್ಟಿಸಿದೆ. ಸಂಜೆವರೆಗೆ ಕೊರೋನಾ ದ್ವಿಶತಕ ಬಾರಿಸಿಲಿದೆ..