ಮೂಡಲಗಿಯಲ್ಲಿ ಸಂಭ್ರಮದ ರಂಜಾನ್ ಆಚರಣೆ
ಮೂಡಲಗಿ: ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಬಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಂಭ್ರಮದ ರಂಜಾನ್ ಹಬ್ಬವನ್ನು ಆಚರಿಸಿದರು.
ಧರ್ಮಗುರುಗಳಾದ ಕೌಸರ ರಜಾ ಅವರು ಮಂತ್ರ ಪಠಣ ಮಾಡಿ ರಂಜಾನ್ ಹಬ್ಬದ ವೈಶಿಷ್ಟ್ಯದ ಕುರಿತು ಪ್ರವಚಣ ಹೇಳಿ ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕುಬೇಕು ಎಂದು ಸಂದೇಶ ಸಾರಿದರು.
ಬಾಜಾರ ಮಸೀದಿಯಿಂದ ಪ್ರಮುಖ ವೃತ್ತಗಳಲ್ಲಿ ಅಲ್ಲಾಹನ ನಾಮಸ್ಮರಣೆಯೊಂದಿಗೆ ಮೆರವಣಿಗೆ ಸಾಗಿ ಜಾಮೀಯಾ ಮಸೀದಿ ತಲುಪಿ ಪ್ರಾರ್ಥನೆ ಸಲ್ಲಿಸಿ ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು
ಪಟ್ಟಣದ ಎಲ್ಲ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು
ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಫೀಜ ನಿಜಾಮುದ್ದೀನ, ಶೌಕತ್ ರಜಾ, ನಾಜೀಮ ಆಲಮ್, ತಹಸೀಲ್ದಾರ ಡಿ ಜಿ ಮಹಾತ, ಬಿಟಿಟಿ ಕಮೀಟಿ ಅಧ್ಯಕ್ಷ ಶರೀಫ್ ಪಟೇಲ, ಮಲೀಕ ಕಳ್ಳಿಮನಿ,ಸಲೀಂ ಇನಾಮದಾರ, ಯೂನೂಸ ಹವಾಲ್ದಾರ, ಹಸನಸಾಬ ಮುಗುಟಖಾನ, ಅಬ್ದುಲ್ ರಹೀಂ ತಾಂಬೋಳಿ, ಮೀರಾಸಾಬ ಝಾರೆ, ರೆಹಮಾನ ಝಾರೆ, ಡಾ. ಅಲ್ಲಾನೂರ ಬಾಗವಾನ, ಅಮೀರಹಮ್ಜಾ ಥರಥರಿ, ಹಸನ ಅತ್ತಾರ, ಬಸೀರ ಪೀರಜಾದೆ, ರಶೀದ ಪಠಾಣ, ಮುಸ್ತಫಾ ಡಾಂಗೆ, ಮಲೀಕ ಡಾಂಗೆ, ರಫೀಕ ಕಡಗಾಂವಕರ ಸೇರಿದಂತೆ ಅನೇಕರು ಇದ್ದರು.
ಪೋಟೋ ಕ್ಯಾಪ್ಷನ್ > ಮೂಡಲಗಿ: ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಬಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಂಭ್ರಮದ ರಂಜಾನ್ ಹಬ್ಬವನ್ನು ಆಚರಿಸಿದರು.