Breaking News
Home / Recent Posts / ರೈತರ ಸ್ವಾವಲಂಬಿ ಬದುಕಿಗೆ ಕೆಎಂಎಫ್ ವರದಾನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ರೈತರ ಸ್ವಾವಲಂಬಿ ಬದುಕಿಗೆ ಕೆಎಂಎಫ್ ವರದಾನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ರೈತರ ಸ್ವಾವಲಂಬಿ ಬದುಕಿಗೆ ಕೆಎಂಎಫ್ ವರದಾನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ದೇಶದಲ್ಲಿಯೇ ಸಹಕಾರಿ ರಂಗದ ಎರಡನೇಯ ಸ್ಥಾನದಲ್ಲಿರುವ ಕೆಎಂಎಫ್ ರೈತರ ಆರ್ಥಿಕಾಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದಲ್ಲಿ ಕಳೆದ ಮಂಗಳವಾರದಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದಿಂದ 19.50 ಲಕ್ಷ ರೂ.ಗಳ ಚೆಕ್‍ಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಕೆಎಂಎಫ್ ಇನ್ನಷ್ಟು ಎತ್ತರಕ್ಕೆ ಬೆಳೆಸಿ ರೈತರ ಸ್ವಾವಲಂಬಿ ಬದುಕಿಗೆ ಭದ್ರಬುನಾದಿ ಹಾಕುವುದಾಗಿ ತಿಳಿಸಿದರು.


ಶಿಂಧಿಕುರಬೇಟ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಕ್ಕೆ 5 ಲಕ್ಷ ರೂ. ಖಾನಾಪೂರ, ಮುನ್ಯಾಳ, ಬಸವನಗರ ಹುಣಶ್ಯಾಳ ಪಿವಾಯ್ ಸಂಘಗಳ ಕಟ್ಟಡಕ್ಕೆ ತಲಾ 2.50 ಲಕ್ಷ ರೂ. ಮತ್ತು ಶಿವಾಪೂರ(ಹ) ಸಂಘದ ಕಟ್ಟಡಕ್ಕೆ 2 ಲಕ್ಷ ರೂ. ಸೇರಿದಂತೆ ಒಟ್ಟು 14.50 ಲಕ್ಷ ರೂ.ಗಳ ಚೆಕ್‍ಗಳನ್ನು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು.
ಬಸವನಗರ ತೋಟದ ಪದ್ಮಾವತಿ ಸಪ್ತಸಾಗರ, ಖಾನಟ್ಟಿಯ ರಮೇಶ ಬಿ.ಪಾಟೀಲ, ಶಾಂತಿನಗರದ ಅಪ್ಪಯ್ಯ ದೊಡಗೊಂಡಿ, ಸತ್ತೆಪ್ಪ ಬೀರನಗಡ್ಡಿ, ರಡ್ಡೇರಹಟ್ಟಿಯ ಅಪ್ಪಯ್ಯ ಮುರೆನ್ನವರ, ಬೆಟಗೇರಿಯ ಶಿವಾನಂದ ಹಾಲನ್ನವರ ಅವರಿಗೆ ತಲಾ 50 ಸಾವಿರ ರೂ.ಗಳಂತೆ ಒಟ್ಟು 3 ಲಕ್ಷ ರೂ.ಗಳ ರಾಸು ವಿಮೆ ಚೆಕ್‍ಗಳನ್ನು ವಿತರಿಸಿದರು. ಕಲ್ಯಾಣ ಸಂಘದ 2 ಲಕ್ಷ ರೂ. ಸೇರಿದಂತೆ ಒಟ್ಟು 19.50 ಲಕ್ಷ ರೂ.ಗಳ ಚೆಕ್‍ಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ಮೂಡಲಗಿ ಉಪಕೇಂದ್ರ ಅಧಿಕಾರಿ ರವಿ ತಳವಾರ, ವಿಸ್ತರಣಾಧಿಕಾರಿ ವಿಠ್ಠಲ ಲೋಕುರಿ, ಸಚೀನ ಪಡದಲ್ಲಿ, ಡಾ. ಪ್ರಕಾಶ ಬೆಳಗಲಿ, ಡಾ. ಕೌಜಲಗಿ, ಸುರೇಶ ಪಾಟೀಲ, ಸೇರಿದಂತೆ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಫೋಟೋ ಕ್ಯಾಪ್ಷನ್ : ಮೂಡಲಗಿ 1 : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿಯಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ವಿವಿಧ ಯೋಜನೆಗಳಡಿ ಒಟ್ಟು 19.50 ಲಕ್ಷ ರೂ.ಗಳ ಚೆಕ್‍ಗಳನ್ನು ವಿತರಿಸಿದರು. ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಮಲ್ಲು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ