ಮೂಡಲಗಿ: ಮಹಾಸ್ವಾದಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದಯೆ,ಕರುಣೆ,ಪರೋಪಕಾರ, ದಾನ-ಧರ್ಮ, ತ್ಯಾಗ ಕ್ಷಮೆಯ ಸಾಕಾರ ಮೂರ್ತಿಯಾಗಿದ್ದರು ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪಆಯುಕ್ತ ಜಿ.ಬಿಗೌಡಪ್ಪಗೋಳ ಹೇಳಿದರು.
ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ ಮೂರ್ತಿ ಪ್ರತಿμÁ್ಠಪನೆ ಮತ್ತು ಕಳಸಾರೋಹನ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡ ಮೊದಲ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿ ಹೊಂದುತ್ತಿದ್ದರೂ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಎಚ್ಚರಿಕೆ ಗಂಟೆ ಎಂದು ತಿಳಿಸಿದರು. ಗ್ರಾಮಗಳಲ್ಲಿ ಶರಣರ ಆಗಮನದಿಂದ ಸಂತ-ಮಹಾಂತರ ನುಡಿಗಳನ್ನು ಆಲಿಸುವುದರಿಂದ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು.
ಕಕಮರಿಯ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾರಾಜರು ಮಹಾಯೋಗಿ ವೇಮನರ ಕುರಿತು ಮತ್ತು ನಾವಲಗಿ ಹಿರೇಮಠದ ಶ್ರೀ ವೇದಮೂರ್ತಿ ಶ್ರೀಶೈಲ್ ಮಹಾಸ್ವಾಮಿಗಳು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಲಂಬಿಕೆಯ ಸಿದ್ದು ಸಾಧನೆಗಳ ಕುರಿತು ಹಾಗೂ ಶಿರಂಜುಜ್ಞಾನ ಯೋಗಾಶ್ರಮದ ಶ್ರೀ ಬಸವಸಮರ್ಥ ಶ್ರೀಗಳು ಪ್ರವಚನ ನೀಡಿದರು ಶ್ರೀ ಶಂಕರೆಪ್ಪ ಮಹಾರಾಜರುಮೌಲಿಕ ಹಿತೋಪದೇಶ ನೀಡಿದರು.
ಈ ಸಮಯದಲ್ಲಿ ವೆಂಕಟಾಪೂರ ಗ್ರಾಮಸ್ಥರು, ಹೇಮರಡ್ಡಿ ಮಲ್ಲಮ್ಮ ಸಮೀತಿ ಸದಸ್ಯರು, ವಿವಿಧ ಗ್ರಾಮಗಳ ಭಕ್ತಾಧಿಗಳ ಉಪಸ್ಥಿತರಿದರು.