ಬೆಳಗಾವಿ: ತಾಲ್ಲೂಕಿನ ಹಂದಿಗನೂರ ಹತ್ತು ವರ್ಷದ ಬಾಲಕನಿಗೆ ಕೊರೋನಾ ಸೋಂಕು ದೃಢವಾಗಿದೆ. ಸೋಮವಾರದ ಮುಂಜಾನೆಯ ಆರೋಗ್ಯ ಇಲಾಖೆಯ ಬುಲೆಟಿನ್ ದೃಢಪಡಿಸಿದೆ.
ಆ ಬಾಲಕನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ . ಬೆಳಗಾವಿಯಿಂದ ೧೫ ಕಿ.ಮೀ ದೂರದ ಗಡಿ ಗ್ರಾಮವಾದ ಹಂದಿಗನೂರು ಬಾಂಬೆ ಮೂಲದ ನಂಜು ಅಂಟಿದೆ.
ಜಿಲ್ಲೆಯಲ್ಲಿ ಒಟ್ಟು 128 ಜನರಿಗೆ ಕೊರೋನಾ ಸೋಂಕು ತಗುಲಿದೆ. ರಾಜ್ಯದ ಲ್ಲಿ ಇಂದು 69 ಹೊಸ ಕೇಸ್ ಪತ್ತೆಯಾಗಿದ್ದು ಒಟ್ಟು 2158 ಕ್ಕೆ ಕರುನಾಡ ಸೊಂಕಿತರ ಸಂಖ್ಯೆ ಏರಿದೆ.