Breaking News
Home / Recent Posts / ರೈಲ್ವೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ: ಈರಣ್ಣ ಕಡಾಡಿ

ರೈಲ್ವೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ: ಈರಣ್ಣ ಕಡಾಡಿ

Spread the love

ಹಲವು ಬೇಡಿಕೆಗಳೊಂದಿಗೆ ರೈಲ್ವೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯ: ಈರಣ್ಣ ಕಡಾಡಿ
ಆಗಸ್ಟ 15ರೊಳಗೆ ಹುಬ್ಬಳ್ಳಿ-ಮಿರಜ್ ಪ್ಯಾಸೆಂಜರ್ ರೈಲು ಪ್ರಾರಂಭ

ಮೂಡಲಗಿ: ಬೆಳಗಾವಿ ಜಿಲ್ಲೆಗೆ ಅಗತ್ಯವಿರುವ ಹಲವು ಬೇಡಿಕೆಗಳೊಂದಿಗೆ ಸೋಮವಾರ ಸಂಜೆ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿರುವ ರಾಜ್ಯಸಭಾ ಸಂಸದ ಈರಣ್ಣ ಕಡಾಡಿಯವರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆಯನ್ನು ಹುಬ್ಬಳ್ಳಿ ನೈರುತ್ಯ ರೈಲ್ವೆ ಪ್ರಧಾನ ಕಛೇರಿಯಲ್ಲಿ ನಡೆಸಿದರು.


ಸಭೆಯ ಪ್ರತಿಫಲವಾಗಿ ಕೂಡಲೆ ಸ್ಪಂಧಿಸಿದ ಅಧಿಕಾರಿಗಳು ಪ್ಯಾಸೆಂಜರ್ ರೈಲುಗಳ ಸ್ವಚ್ಚತೆಯನ್ನು ಬೆಳಗಾವಿಯಲ್ಲಿಯೆ ಮಾಡುವ ವ್ಯವಸ್ಥೆ ಮಾಡಿಕೊಂಡು ಆಗಸ್ಟ್ 15ರೊಳಗೆ ಹುಬ್ಬಳ್ಳಿ- ಮಿರಜ್ ಪ್ಯಾಸೆಂಜರ್ ರೈಲು ಪ್ರಾರಂಭಿಸುವ ಭರವಸೆ ನೀಡಿರುವುದಲ್ಲದೆ ಘಟಪ್ರಭಾದಲ್ಲಿ ಈ ಹಿಂದೆ ನಿಲುಗಡೆ ಇಲ್ಲದ ಸುಮಾರು 9 ರೈಲುಗಳನ್ನು ಅಲ್ಲಿಯ ಸಾರ್ವಜನಿಕರ ಒತ್ತಾಯದ ಮೆರೆಗೆ ಇನ್ನು ಮುಂದೆ 1 ನಿಮಿಷ ನಿಲುಗಡೆ ಮಾಡಲು ಕೇಂದ್ರ ರೈಲ್ವೆ ಇಲಾಖೆಯಿಂದ ಒಪ್ಪಿಗೆ ಪಡೆಯುವುದಾಗಿ ಹೇಳಿದರು. ಹಾಗೂ ಸ್ವಚ್ಚತೆ ಬಗ್ಗೆ ಅಪಸ್ವರವಿರುವ ರಾಣಿ ಚೆನ್ನಮ್ಮ ಏಕ್ಸ್‍ಪ್ರೆಸ್ಸ್ ರೈಲ್ವೆ ಸ್ವಚ್ಚತೆ ಕಾಪಾಡುವುದಾಗಿ ಹೇಳಿದರು. ಹಾಗೂ ಅದೇ ರೈಲ್ವೆಗೆ ಹೋಗುವಾಗ ಒಂದು ಹೆಸರು ಬರುವಾಗ ಇನ್ನೊಂದು ಹೆಸರು ಇರುವುದನ್ನು ಸರಿಪಡಿಸಿ ಇನ್ನು ಮುಂದೆ ರಾಣಿ ಚೆನ್ನಮ್ಮ ಹೆಸರಿನಲ್ಲಿ ರೈಲು ಓಡಾಟ ನಡೆಸುವ ಭರವಸೆ ನೀಡಿದರು ಹಾಗೂ ಇನ್ನು ಮುಂದೆ ನಿಗದಿತ ಸಮಯದಲ್ಲಿಯೆ ರಾಣಿ ಚೆನ್ನಮ್ಮ ರೈಲ್ವೆ ಓಡಾಟ ನಡೆಸುತ್ತದೆ. ಹಾಗೂ ಬೆಂಗಳೂರು ಮಿರಜ್ ಡಬಲ್ ಲೈನ್ ಹಳಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು ಬೆಂಗಳೂರು-ಹುಬ್ಬಳ್ಳಿ 40ಕೀ.ಮೀ, ಹುಬ್ಬಳ್ಳಿ-ಬೆಳಗಾವಿ 40ಕಿ.ಮೀ ಹಾಗೂ ಬೆಳಗಾವಿ-ಮಿರೆಜ್ 68ಕೀ.ಮಿ ಕಾಮಾಗಾರಿ ಬಾಕಿ ಉಳಿದಿದ್ದು ಅದನ್ನು 2023 ಜುಲೈ ಒಳಗೆ ಪೂರ್ಣಗೊಳಿಸುತ್ತೇವೆ ಇದರಿಂದ 2 ಗಂಟೆ ಸಮಯ ಪ್ರಯಾಣಿಕರಿಗೆ ಉಳಿತಾಯವಾಗುತ್ತದೆ ಎಂದು ಹೇಳಿದರು. ಮತ್ತು ಬೆಳಗಾವಿ ರೈಲ್ವೆ ನಿಲ್ದಾಣವನ್ನು ಈ ತಿಂಗಳು ಅಂತ್ಯದೊಳಗೆ ಸಿದ್ಧಗೊಳಿಸುತ್ತೇವೆ ಮತ್ತು ಘಟಪ್ರಭಾ ರೈಲ್ವೆ ನಿಲ್ದಾಣವು ಹೊಸದಾಗಿ ನಿರ್ಮಾಣಗೊಂಡಿದ್ದು ಅಲ್ಲಿಯೂ ಸಹ ಪ್ರಯಾಣಿಕರಿಗೆ ಇನ್ನಷ್ಟು ಸೌಕರ್ಯ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈಲ್ವೆ ಉನ್ನತ ಅಧಿಕಾರಿಗಳಾಗಿರುವ ಸಂತೋಷ ಹೆಗಡೆ, ಹರಿಶಂಕರ ವರ್ಮ, ನೀರಜ್ ಅಗರವಲ. ಎಸ್.ಕೆ.ವರ್ಮ,ಟಿ.ವಿ.ಭೂಷಣ, ಇಶಾನ್ ಕಿಶಾನ್ ಹಾಜರಿದ್ದರು.
ಹಾಗೂ ಘಟಪ್ರಭಾದಿಂದ ಹಿರಿಯರಾದ ಸುರೇಶ ಪಾಟೀಲ, ವಿಶ್ವನಾಥ ಯಾದಗೂಡೆ, ಸುಭಾಸ ಗಾಯಕವಾಡ, ಚನ್ನಬಸವ ಅಂಗಡಿ, ಮಲ್ಲು ಗೌರಾನಿ, ಮಲ್ಲಪ್ಪ ಹುಕ್ಕೇರಿ, ಲಕ್ಷ್ಮಣ ಮೇತ್ರಿ, ಪ್ರಭು ಶಿವಪೂರೆ, ಫಯಾಜ್ ಶೇಕ್ ಹಾಜರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ