ಮೂಡಲಗಿ: ಕಠಿನ ಪರೀಕ್ಷೆಗಳಲ್ಲಿ ಒಂದಾದ ಚಾರ್ಟೆಡ್ ಅಕೌಂಟೆಂಟ್ ಆಪ್ ಇಂಡಿಯಾ ಪರೀಕ್ಷೆಯಲ್ಲಿ ತಾಲೂಕಿನ ಪಟಗುಂದಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಬಾಹುಬಲಿ ಅಣ್ಣಪ್ಪ ಹೊಸಮನಿ ಅವರು ಉತ್ತಮ ದರ್ಜೆಯಲ್ಲಿ ಉತ್ತೀರ್ಣವಾಗಿ ಗ್ರಾಮದ ಕೀರ್ತಿ ತಂದಿದ್ದಾರೆ.ಪ್ರೌಡ ಹಾಗೂ ಬಿ ಕಾಮ್ ಪದವಿ ಶಿಕ್ಷಣವನ್ನು ಮೂಡಲಗಿಯ ಎಮ್ ಇ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪೊರೈಸಿ ಯಾವುದೇ ತರಬೇತಿ ಪಡೆಯದೇ ನಾಲ್ಕು ವರ್ಷ ಕಠಿನ ಪರಿಶ್ರಮದಿಂದ ಸತತ ಅದ್ಯಯನದಲ್ಲಿ ತೊಡಗಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.