Breaking News
Home / Recent Posts / ಶೈಕ್ಷಣಿಕವಾಗಿ ಉತ್ತಮ ಕಲಿಕಾ ವಾತಾವರಣ ಸೃಷ್ಠಿಸುವಲ್ಲಿ ಮಾನಸಿಕ ದೃಢತೆಗೆ ದೈಹಿಕ ಸದೃಢತೆ ಅತ್ಯಾವಶ್ಯಕವಾಗಿದೆ- ಅಶೋಕ ಮಲಬನ್ನವರ

ಶೈಕ್ಷಣಿಕವಾಗಿ ಉತ್ತಮ ಕಲಿಕಾ ವಾತಾವರಣ ಸೃಷ್ಠಿಸುವಲ್ಲಿ ಮಾನಸಿಕ ದೃಢತೆಗೆ ದೈಹಿಕ ಸದೃಢತೆ ಅತ್ಯಾವಶ್ಯಕವಾಗಿದೆ- ಅಶೋಕ ಮಲಬನ್ನವರ

Spread the love

ಮೂಡಲಗಿ: ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು. ಸದೃಢ ಶರೀರ ರೂಪಗೊಳ್ಳುವ ನಿಟ್ಟಿನಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಮಾತ್ರ ಸಾಧ್ಯವಾಗುವದು ಎಂದು ಮೂಡಲಗಿ/ಗೋಕಾಕ ತಾಪಂ ಸಹಾಯಕ ಮದ್ಯಾಹ್ನ ಉಪಹಾರ ಯೋಜನೆ ಸಹ ನಿರ್ದೇಶಕ ಅಶೋಕ ಮಲಬನ್ನವರ ಹೇಳಿದರು.
ಅವರು ಗುರುವಾರ ಪಟ್ಟಣದ ಕೆ.ಎಚ್.ಎಸ್ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಯೋಜನೆಯಡಿ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು, ಚಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರಕಾರವು ವಿದ್ಯಾರ್ಥಿಗಳಿಗೆ ದೈಹಿಕವಾಗಿ ಸದೃಢರಾಗಲು ಹಾಲು, ಮದ್ಯಾಹ್ನ ಉಪಹಾರ, ಮೊಟ್ಟೆ, ಬಾಳೆ ಹಣ್ಣು, ಚಕ್ಕಿ ಹಾಗೂ ಶಾಲಾ ಹಂತದಲ್ಲಿ ವಿವಿಧ ಬಗೆಯ ಖ್ಯಾದ್ಯಗಳನ್ನು ನೀಡುವ ಮೂಲಕ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತಿದೆ. ಶೈಕ್ಷಣಿಕವಾಗಿ ಉತ್ತಮ ಕಲಿಕಾ ವಾತಾವರಣ ಸೃಷ್ಠಿಸುವಲ್ಲಿ ಮಾನಸಿಕ ದೃಢತೆಗೆ ದೈಹಿಕ ಸದೃಢತೆ ಅತ್ಯಾವಶ್ಯಕವಾಗಿದೆ. ತಲಾ ೬ ರೂ.ಗಳ ವೆಚ್ಚದಲ್ಲಿ ವಿದ್ಯಾರ್ಥಿಗಳ ಇಚ್ಚಾನುಸಾರ ಉಪಹಾರದ ಜೊತೆ ನೀಡಬೇಕು. ಬಿಇಒ ಅಜಿತ ಮನ್ನಿಕೇರಿಯವರ ಮಾರ್ಗದರ್ಶನದಂತೆ ಯೋಜನೆಯನ್ನು ಸಕಾರಗೊಳಿಸಬೇಕು. ಮಹತ್ವಾಕಾಂಕ್ಷಿ ಯೋಜನೆಯಾಗಿರುವದರಿಂದ ಪ್ರತಿಯೊಬ್ಬ ಫಲಾನುಭವಿಗಳಿಗೂ ದೊರೆಯುವಂತೆ ನೋಡಿಕೊಳ್ಳಬೇಕು. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬಿಸಿಯೂಟ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ನುಡಿದರು.
ಕಹಾಮ ಅಧ್ಯಕ್ಷರು, ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಶುಭ ಸಂದೇಶದಲ್ಲಿ, ಕರ್ನಾಟಕ ಸರಕಾರವು ಜಾರಿಗೆ ತಂದಿರುವ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದಾರೆ. ಗುಣಮಟ್ಟದ ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಅತ್ಯಾವಶ್ಯಕವಾಗಿದೆ. ಬಡ ಹಾಗೂ ದೈಹಿಕವಾಗಿ ಪೋಷಕಾಂಶಗಳ ಕೊರತೆಯಿರುವ ವಿದ್ಯಾರ್ಥಿಗಳಿಗೆ ಸದೃಢ ದೇಹ ಹೊಂದಲು ಸಹಾಯಕವಾಗುವದು. ಈ ಯೋಜನೆಯ ಲಾಭವನ್ನು ಮೂಡಲಗಿ ವಲಯದ ಎಲ್ಲ ಸರಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಪಡೆದುಕೊಂಡು ಯೋಜನೆಯನ್ನು ಸಮರ್ಪಕವಾಗಿ ಬಳಸಬೇಕು ಎಂದು ತಿಳಿಸಿದ್ದಾರೆ.
ಮೂಡಲಗಿ ಶೈಕ್ಷಣಿಕ ವಲಯಾದ್ಯಂತ ಜರುಗಿದ ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಯೋಜನೆಯಡಿ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು, ಚಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ತುಕ್ಕಾನಟ್ಟಿ ಗ್ರಾಮಕ್ಕೆ ಬೆಳಗಾವಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಎಚ್ .ವಿ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಗೋಕಾಕ ತಾಪಂ ಇಒ ಮುರಳಿಧರ ದೇಶಪಾಂಡೆ, ಮೂಡಲಗಿ ತಾಪಂ ಇಒ ಎಫ್.ಜಿ ಚಿನ್ನನವರ, ಮೂಡಲಗಿ ಸಿಡಿಪಿಒ ಯಲ್ಲಪ್ಪ ಗದಾಡಿ, ಕೃಷಿ ಅಧಿಕಾರಿ ಎಮ್.ಎಮ್ ನದಾಫ್, ತೋಟಗಾರಿಕೆ ಸಹಾಯಕ ನಿರ್ದೇಶಕ ಜನಮಟ್ಟಿ, ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ, ಚಿಕ್ಕೋಡಿಯ ವಿಷಯ ಪರಿವೀಕ್ಷಕ ಅರಿಹಂತ ಬಿರಾದಾರ ಪಾಟೀಲ ಅವರು ಶೈಕ್ಷಣಿಕ ವಲಯಾದ್ಯಂತ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸರಕಾರದ ಯೋಜನೆಯನ್ನು ಅನುಷ್ಠಾನಗೊಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ತಹಶೀಲ್ದಾರ ಡಿ.ಜಿ ಮಹಾತ, ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಶಾಲಾ ಭೂದಾನಿ, ಪುರಸಭೆ ಸದಸ್ಯ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ ಸೋನವಾಲಕರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಪಿಎಸ್‌ಐ ಹಾಲಪ್ಪ ಬಾಲದಂಡಿ, ಭೂನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ, ರಾಘವೇಂದ್ರ ಪಾಟೀಲ, ಸಿಆರ್‌ಪಿ ಸಮೀರಅಹ್ಮದ ದಬಾಡಿ, ಮುಖ್ಯೋಪಾಧ್ಯಾಯ ಎಮ್.ಎಮ್ ದಬಾಡಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ ಹಾಗೂ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಎಸ್.ಎಮ್ ಶೆಟ್ಟರ ನಿರೂಪಿಸಿದರು. ಚಿತ್ರಕಲಾ ಶಿಕ್ಷಕ ಎ.ಆರ್.ಕುರುಬರ ಸ್ವಾಗತಿಸಿ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ