ಕರ್ನಾಟಕ ಗರುಡ ಸಂಸ್ಥೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಗೀತ ಭೀಮಪ್ಪ ಹೂಗಾರ್ ಇವರ ನೇತೃತ್ವದಲ್ಲಿ ಮನವಿ
ಮೈಕ್ರೋಫೈನಾನ್ಸ್ ಸಂಘಗಳಲ್ಲಿ ಸಾಲ ಪಡೆದಿರುವ ಮಹಿಳೆಯರಿಗೆ ಸಾಲ ತುಂಬಲು ಐದು ತಿಂಗಳು ಕಾಲ ಅವಕಾಶ ನೀಡ ಬೇಕು ಎಂದು ಮೂಡಲಗಿ ತಹಶಿಲ್ದಾರ ಅವರ ಮುಕಾಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಬಿಎಸ್ ಯಡಿಯೂರಪ್ಪ ಕರ್ನಾಟ ಕ ಸರ್ಕಾರ ಬೆಂಗಳೂರು ಅವರಿಗೆ ಮನವಿ
ಈ ಮೂಡಲಗಿ ಗ್ರಾಮದ ಮಹಿಳಾ ಸಂಘಗಳಲ್ಲಿ ಸಾಲ ಪಡೆದಿರುವ ಮಹಿಳೆಯರು ಮನವಿ ಪತ್ರದಲ್ಲಿ ಮೈಕ್ರೋ ಫೈನಾನ್ಸ್ ಸಂಘಗಳ ಆದ ತಿರುಪತಿ, ಮಂಜುನಾಥ, ಎಸ್ ಕೆ ಎಸ್, ಭಾರತ ಫೈನಾನ್ಸ್ ಸಂಘ, ಗ್ರಾಮೀಣ ಕೂಟ, ಸ್ಪಂದನ ಮುಂತಾದ ಸಂಘಗಳಲ್ಲಿ ಸಾಲವನ್ನು ಪಡೆದಿದ್ದು ಸದರಿ ಲಾಕ ಡೌನ್ ಆದನಂತರ ನಮಗೆ ಯಾವುದೇ ರೀತಿಯ ಕೆಲಸ ಕಾರ್ಯಗಳು ಸಿಗದೆ ನಮಗೆ ಹಣಕಾಸಿನ ತೊಂದರೆ ಉಂಟಾಗಿದೆ ಆರ್ಥಿಕವಾಗಿ ನಾವು ಅಸಾಯ ಕರಾಗಿರುವುದರಿಂದ ಮತ್ತು ನಮಗೆ ಯಾವುದೇ ರೀತಿಯ ಉದ್ಯೋಗ ಸಿಗದೆ ನಾವು ಮಾಡುವ ವ್ಯಾಪಾರ ಸಂಪೂರ್ಣವಾಗಿ ನಿಂತು ಹೋಗಿರುವುದರಿಂದ ನಮಗೆ ನಮ್ಮ ಕುಟುಂಬಗಳ ನಿರ್ವಹಣೆ ಮಾಡುವುದು ಕಷ್ಟವಾಗಿದೆ ದಯಮಾಡಿ ತಾವುಗಳು ಮೇಲ್ಕಾಣಿಸಿದ ಸಂಘಗಳ ನಾವು ಪಡೆದಿರುವ ಸಾಲ ಕಂತುಗಳನ್ನು ತುಂಬಲು ಐದು ತಿಂಗಳು ಕಾಲಾವಕಾಶ ನೀಡುವಂತೆ ಈ ಸಂಘಗಳ ಮುಖ್ಯಸ್ಥರಿಗೆ ಸೂಚನೆ ನೀಡಬೇಕೆಂದರು.
ಕರ್ನಾಟಕದ ಗರುಡ ಸಂಸ್ಥೆಯ
ಲಕ್ಷ್ಮಣ ಮೆಳ್ಳಿಗೇರಿ ರಾಜ್ಯ ಸಂಚಾಲಕರು, ಪ್ರಕಾಶ್ ಮಾದರ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು, ಮಹದೇವ ಶೆಕ್ಕಿ ಅರಭಾವಿ ಬಿ ಜೆ ಪಿ ಬ್ಲಾಕ್ ಅಧ್ಯಕ್ಷರು, ಯಶ್ವಂತ್ ಸರ್ವಿ, ನಂಜುಂಡಿ ಸರ್ವಿ, ಸಮಾಜ ಸೇವಕರು ಅಶೋಕ್ ಸಿದ್ದಲಿಂಗಪ್ಪಗೋಳ, ಡಿ ಎಸ್ಎಸ್ ಯಶ್ವಂತ್ ಮುಂಟೂರ ಗಣ್ಯರು ಹಾಗೂ ಉಪಸ್ಥಿತರಿದ್ದರು.