2 ಕ್ವೀಟಾಲ ಜಿಲೇಬಿ ವಿತರಿಸಿದ
ಗೆಳೆಯರ ಬಳಗ
ಮೂಡಲಗಿ- ಭಾರತ ವಿವೀದತೇಯಲ್ಲಿ ಏಕತೆ ಕಂಡ ದೇಶ, ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಮಯದಲ್ಲಿ ವಿವಿಧ ಪ್ರಕಾರದ ಸೇವೆಯನ್ನು ಎಲ್ಲರೂ ಮೈಗೊಡಿಸಿಕೊಂಡಿರುವದು ಸಂತಸದ ವಿಷಯ ಇದು ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು,
ಸೋಮವಾರ ಕಲ್ಮೇಶ್ವರ ವೃತ್ತದಲ್ಲಿ 1987 -90 ನೇ ಸಾಲಿನ ಶ್ರೀ ಶಿವಬೋಧರಂಗ ಪ್ರೌಡ ಶಾಲೆಯ ಗೆಳೆಯರ ಬಳಗದ ಮಿತ್ರರಿಂದ ವಿಧ್ಯಾರ್ಥಿಗಳಿಗೆ ಶಿಕ್ಷಕರಿಗೆ 2 ಕ್ವೀಟಾಲ್ ಜೀಲೆಬಿ ವಿತರಿಸಿ ಮಾತನಾಡಿದರು,
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ದೇಶದ ರಾಷ್ರ್ಟೀಯ ಸಿಹಿಯಾದ ಜಿಲೇಬಿ ವಿತರಣೆಯ ಕಾರ್ಯಕ್ರಮವು ಇತರಿಗೆ ಮಾದರಿಯಾಗಿದೆ 75ನೇ ವರ್ಷದ ಸಂಬ್ರಮ ಹೀಗೂ ಆಚರಿಸಿಬಹುದು ಹಳೆಯ ವಿಧ್ಯಾರ್ಥಿಗಳು ಹುಮ್ಮಸಿನಿಂದ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು,
ಬಿಜೆಪಿ ಮುಖಂಡ ಪ್ರಕಾಶ ಮಾದರ, ಪಿ ಎಸ್ ಐ ಹಾಲಪ್ಪ ಬಾಲದಂಡ್ಡಿ, ಗೆಳೆಯರ ಬಳಗದ ಶಿವಾನಂದ ಕಂಬಾರ, ಲಕ್ಕಪ್ಪ ಹುಚರೆಡ್ಡಿ, ಮಹೇಶ ಹೀರೆಮಠ, ರಾಜು ಬಡಿಗೇರ, ಶಿವಾನಂದ ಮುಧೋಳ, ಚನ್ನವೀರ ಅಂಗಡಿ, ಸಂತೋಷ ಆನಿಕಿಂಡಿ, ಉಮೇಶ ಬೆಳಕೂಡ, ಸುರೇಶ ಬೆಳಕೂಡ, ಸುಬಾಸ ಅವಟಿ, ಮಲ್ಲಿಕಾರ್ಜುನ ನೀಡಸೊಸಿ, ರಪೀಕ ತಾಂಬೋಳಿ, ಸಂತ್ರಾಮ ನಾಶಿ ಸಹಿತ ಹಲವರಿದ್ದರು.