ಮೂಡಲಗಿ : ಸಮಾಜದ ತಪ್ಪು ತಡೆಗಳನ್ನು ಪತ್ರಿಕೆ, ಮಾಧ್ಯಮಗಳಲ್ಲಿ ಬಿತ್ತರಿಸಿ,ಸರ್ಕಾರದ ಗಮನಕ್ಕೆ ತರುತ್ತ,ತಮ್ಮ ಜೀವನದ ಬಹುಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಪತ್ರಿಕಾ ಮಿತ್ರರ ಕಾರ್ಯ ಪ್ರಶಂಸನೀಯವಾದದ್ದು ಎಂದು ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹದೇವ ಶೆಕ್ಕಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕೀಹೊಳಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಂತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಡಲಗಿ ಘಟಕಕಕ್ಕೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಕೃಷ್ಣ ಗಿರೇನ್ನವರ, ಉಪಾಧ್ಯಕ್ಷ ಲಿಂಗಪ್ಪ ಗಾಡವಿ ,ಮತ್ತೋರ್ವ ಉಪಾಧ್ಯಕ್ಷ ಶಿವಾನಂದ ಮರಾಠೆ, ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಸಹ ಕಾರ್ಯದರ್ಶಿ ಅಲ್ತಾಫ್ ಹವಾಲ್ದಾರ್, ಮತ್ತೋರ್ವ ಸಹ ಕಾರ್ಯದರ್ಶಿ ವೆಂಕಪ್ಪ ಬಾಲರಡ್ಡಿ, ಖಜಾಂಚಿಯಾಗಿ ಮಹದೇವ್ ನಡುವಿನಕೇರಿ ಸೇರಿದಂತೆ ಎಲ್ಲ ಪದಾಧಿಕಾರಿಗಳಿಗೆ ಸತ್ಕರಿಸಿ ಶುಭವನ್ನು ಕೋರುತ್ತ,ಹೀಗೆ ಇನ್ನು ಉನ್ನತ ಸ್ಥಾನ ಮಾನಗಳನ್ನು ಗಳಿಸುತ್ತ, ಪತ್ರಿಕಾ ರಂಗದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.
ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಮಾತನಾಡಿ,ಮೂಡಲಗಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಡಲಗಿ ತಾಲೂಕ ಘಟಕ ನೂತನವಾಗಿ ಸ್ಥಾಪನೆಯಾಗಿದ್ದು ತುಂಬಾ ಖುಷಿ ತಂದಿದೆ,ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗಳಿಗೆ ಶುಭಾಶಯಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ, ಬಿಜೆಪಿ ಅರಭಾವಿ ಮಂಡಲ ಪದಾಧಿಕಾರಿಗಳಾದ ಪಾಂಡುರಂಗ ಮಹೇಂದ್ರಕರ್, ಮಹಾಂತೇಶ್ ಕುಡಚಿ,ಈರಪ್ಪ ಧವಳೇಶ್ವರ್, ಕೇದಾರಿ ಭಸ್ಮೆ, ಹಿರಿಯರಾದ ತಿಪ್ಪಣ್ಣ ಕುರುಬಗಟ್ಟಿ, ಜಗದೀಶ್ ತೇಲಿ, ಹಣಮಂತ ಸತರಡ್ಡಿ ಕುಮಾರ್ ಗಿರಡ್ಡಿ, ಸುಭಾಸ ಗೋಡ್ಯಾಗೊಳ, ಸುರೇಶ್ ಎಮ್ಮಿ, ಭಗವಂತ ಉಪ್ಪಾರ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು, ಬಿಜೆಪಿಯ ಅರಭಾವಿ ಮಂಡಲ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಪತ್ತಾರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.