ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಶ್ರಾವಣ ಮಾಸದ ನಿಮಿತ್ಯವಾಗಿ ಜರುಗುತ್ತಿರುವ ಶ್ರೀ ಬಸವ ದರ್ಶನ ಆಜ್ಞಾತ್ಮಿಕ ಪ್ರವಚನ ಕಾರ್ಯಕ್ರಮ ಲೀಲಾಮೃತ ಆದಾರಿತ ಪುರಾಣ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವವು ಆ.28 ರವಿವಾರದಂದು ಜರುಗಲಿದೆ.
ಆ.28ರಂದು ಬೆಳಗ್ಗೆ 4ಕ್ಕೆ ವೇದಮೂರ್ತಿ ಶ್ರೀ ಅನ್ನಯ್ಯ ಶಾಸ್ತ್ರಿಗಳ ವೈಧಿಕತ್ವದಲ್ಲಿ ಶ್ರೀ ಬಸವೇಶ್ವರ ಗದ್ದುಗೆಗೆ ಮಹಾ ರುದ್ರಾಭಿಷೇಕ ಜರುಗುವುದು, 9ಕ್ಕೆ ಸಕಲ ಮಂಗಲ ವಾದ್ಯಮೇಳದೊಂದಿಗೆ ಕುಂಭೋತ್ಸವ ಹಾಗೂ ಶ್ರೀ ಬಸವೇಶ್ವರ ಪಲ್ಲಕ್ಕಿ ಉತ್ಸವ ಜರುಗುವುದು. ನಂತರ ಬೀದರ ಜಿಲ್ಲೆಯ ಹೂಲಸೂರ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಶಿವಾನಂದ ಮಹಾಸ್ವಾಮಿಜಿ, ಬಾಗೋಜಿಕೊಪ್ಪ-ಮುನ್ಯಾಳ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿಗಳು, ಬನಹಟ್ಟಿಯ ಶ್ರೀ ಪ್ರಭು ಮಹಾಸ್ವಾಮಿಗಳು, ತೆಲ್ಲೂರ-ಗದಗದ ಪ್ರವಚನಕಾರ ಶ್ರೀ ಸಿದ್ಧೇಶ್ವರ ಶಾಸ್ತ್ರೀಗಳು ಆಶೀರ್ವಚನ ನೀಡುವರು ಹಗು ಶ್ರೀ ಈರಯ್ಯಾ ಹಿರೇಮಠ ಶ್ರೀಗಳು ಮತ್ತಿತರು ಉಪಸ್ತಿತರಿರುವರು. ಮಧ್ಯಾಹ್ನ ಅನ್ನ ಪ್ರಸಾದ ಜರುಗುವುದು ಕಾರಣ ಸಕಲ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಬಸವೇಶ್ವರ ದೇವರಿಗೆ ಕೃಪೆಗೆ ಪಾತ್ರರಾಗಬೇಕೆಂದು ದುಂಡಪ್ಪ ಸತ್ತಿಗೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.