ಮೂಡಲಗಿ: ರಾಜ್ಯ ಮಟ್ಟದ ಟಗರಿನ ಕಾಳಗಕ್ಕೆ ಅದ್ದೂರಿ ಚಾಲನೆ. ಟಗರಿನ ಕಾಳಗದಲ್ಲಿ ಸೊಲು ಗೆಲವು ಒಂದು ನಾಣ್ಯದ ಎರಡು ಮುಖಗಳಿದಂತೆ ಸೊತವರು ಕುಗ್ಗದೆ ಗೆದ್ದವರು ಹಿಗ್ಗದೆ ಆಟದ ಮನೊಬಾವ ಬೇಳಸಿಕೊಳಬೇಕು ಎಂದು ಮೂಡಲಗಿ ಪುರಸಭೆ ಅಧ್ಯಕ್ಷರಾದ ಹಣಮಂತ ಗುಡ್ಲಮನಿ ಹೇಳಿದರು.
ಪಟ್ಟಣದ ಶಾಬಣ್ಣವರ ಗವಿತೋಟ ಶಾಲೆಯ ಮೈದಾನದಲ್ಲಿ ಗಣೇಶ ಚತುರ್ಥಿ ನಿಮಿತ್ಯವಾಗಿ ಹಮ್ಮಿಕೊಂಡಿದ ರಾಜ್ಯ ಮಟ್ಟದ ಟಗರಿನ ಕಾಳಗ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಭಾಗದ ಶಾಸಕರು ಹಾಗೂ ಕೆ ಎಮ್ ಎಪ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಗ್ರಾಮಿಣ ಭಾಗದ ಆಟಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗುವದು ಎಂದರು. ಪುರಸಭೆ ಸದಸ್ಯರು ಮತ್ತು ವೇಮನ್ ಬ್ಯಾಂಕ್ ಅಧ್ಯಕ್ಷರಾದ ಸಂತೋಷ ಸೋನವಾಲಕರ ಕಾರ್ಯಕ್ರಮ ಉದ್ಘಾಟಿಸಿದರು.
ಭೂ ನ್ಯಾಯ ಮಂಡಳಿಯ ಸದಸ್ಯರಾದ ಭೀಮಶಿ ಮಗದುಮ್ಮ ಮಾತನಾಡಿ ಪ್ರತಿಯೊಬ್ಬರು ಗುರಿ ಮುಟ್ಟಲು ನಿರಂತರ ಪ್ರಯತ್ನ ಕಟಿನ ಪ್ರರಿಶ್ರಮ ಪಡಬೇಕು ಎಂದು ಹೇಳಿದರು. ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ ವಿಜೇತರು ಹಾಗೂ ಯುವ ಸಂಘಟಕ ಸಿದ್ದಣ್ಣ ದುರದುಂಡಿ ರಾಜ್ಯ ಮಟ್ಟದ ಟಗರಿನ ಕಾಳಗದ ಬಹುಮಾನ ವಿತರಿಸಿ ಮಾತನಾಡಿ ರಾಜ್ಯ ಮಟ್ಟದ ಟಗರಿನ ಕಾಳಗ ಬಹಳ ಸಂಭ್ರಮದಿಂದ ನಡದಿದೆ ಇಂತಹ ಕಾರ್ಯಕ್ರಮವನ್ನು ಮಾಡಿದ ಲಕ್ಷ್ಮೀ ಗಜಾನನ ಕಮಿಟಿ ಸರ್ವ ಸದಸ್ಯರ ಕಾರ್ಯ ನಿಜವಾಗಲು ಶ್ಲಾಘನಿಯವಾಗಿದೆ ಎಂದು ಹೇಳಿದರು. ಕಾರ್ಯಕ್ರದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಸತ್ಯಪ್ಪ ಯಡ್ರಾಂವಿ ಶಿಕ್ಷಕ ಸಂತೋಷ ಪಾಟೀಲ ಲಕ್ಷ್ಮಣ ಶಾಬಣ್ಣವರ ಸದಾಶಿವ ಶಾಬಣ್ಣವರ ಡಾ. ಸಂಗಮೇಶ ಶಿರಹಟ್ಟಿ ಯಲ್ಲಾಲಿಂಗ ವಾಳದ ರಾಜು ಬಜಂತ್ರಿ ಸಂಘಟಕರಾದ ಸತ್ಯಪ್ಪಾ ರಾಜಾಪೂರ ಗೋಪಾಲ ಶಾಬಣ್ಣವರ ಸದಾಶಿವ ಶಾಬಣ್ಣವರ ಉಮೇಶ ಹಳ್ಳೂರ ಶಿವಬಸು ಶಾಬಣ್ಣವರ ಸುಭಾಸ ಮಾಲಗಾರ ಆನಂದ ಶಾಬಣ್ಣವರ ಸುಭಾಸ ಹೊಸಮನಿ ಬಸವರಾಜ ಶಾಬಣ್ಣವರ ಮಹಾದೇವ ಶಾಬಣ್ಣವರ ಲಕ್ಷ್ಮಣ ಶಾಬಣ್ಣವರ ಅಶೋಕ ಶಾಬಣ್ಣವರ ಗುರು ಹಿರಿಯರು ಸಂಘಟಕರು ಯುವಕರು ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ಟಗರಿನ ಪಂದ್ಯಾವಳಿಯ
ಪ್ರಥಮ 20000 ಬಹುಮಾನವನ್ನು ಟಾರ್ಗೆಟ್ ಗಿಡ್ಡ ರಾಮಾಚಾರಿ ಟಗರು ರನ್ನ ಬೆಳಗಲಿ,
ದ್ವಿತಿಯ ಬಹುಮಾನ 15000 ಶ್ರೀ ಮಹಾಕಾಳಿ ಪ್ರಸನ್ನ ಸಾರಾಪೂರ,
ತ್ರತಿಯ ಬಹುಮಾನ 10000 ಜೈ ಹನುಮಾನ ಬಿಸನಕೊಪ್ಪ, ಚತುರ್ಥ ಬಹುಮಾನ 5000 ಕಾಳಿಗ್ರುಪ್ ಬೆಳ್ಳೂಡಿ
ಬಹುಮಾನಗಳನ್ನು ಪಡೆದುಕೋಂಡವು.