Breaking News
Home / Recent Posts / ಜನಬಲ ಮೂಲಕ ಚಾಯ್ ವಾಲಾನಿಂದ ಪ್ರಧಾನಿ ಗುದ್ದೆಗೆ ನರೇಂದ್ರ ಮೋದಿ- ಈರಣ್ಣ ಕಡಾಡಿ

ಜನಬಲ ಮೂಲಕ ಚಾಯ್ ವಾಲಾನಿಂದ ಪ್ರಧಾನಿ ಗುದ್ದೆಗೆ ನರೇಂದ್ರ ಮೋದಿ- ಈರಣ್ಣ ಕಡಾಡಿ

Spread the love

ಮೂಡಲಗಿ: ಹಣಬಲ ತೋಳಬಲಗಳ ಮೂಲಕವೇ ರಾಜಕಾರಣ ಮಾಡುವ ರಾಜಕಾರಣಿಗಳ ಮಧ್ಯೆ ಜನಬಲ ಮೂಲಕ ಚಾಯ್ ವಾಲಾನಿಂದ ಪ್ರಧಾನಿ ಗುದ್ದೆಗೆ ಏರಿ ವಿಶ್ವಮಾನ್ಯ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪಕ್ಷದ ಕಾರ್ಯಕರ್ತರಿಗೂ ಒಂದು ಜೀವಂತ ಉದಾಹರಣೆಯಾಗಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಸೆ.17 ರಂದು ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಮಂದಿರ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಬೆಳಗಾವಿ ಜಿಲ್ಲೆ, ಸಾಮಾಜಿಕ, ಆರ್ಥಿಕ ಮತ್ತು ಕಲ್ಯಾಣ (ಸೇವಾ) ಸಂಸ್ಥೆ ಕಲ್ಲೋಳಿ ಹಾಗೂ ರೋಟರಿ ರಕ್ತ ಭಂಡಾರ ಕೇಂದ್ರ ಗೋಕಾಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ ಬೃಹತ್ ಐಚ್ಛಿಕ ರಕ್ತದಾನ ಶಿಬಿರವನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಂಸದರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದ ಅವರು ದಿನದ 24 ಗಂಟೆಗಳಲ್ಲಿ ಸುಮಾರು 20 ಗಂಟೆಗಳ ಕಾಲ ದೇಶದ ಜನತೆಯ ಅಭಿವೃದ್ದಿ ಪರ ಚಿಂತನೆಗಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರ ಜನ್ಮದಿನ ಶೋಷಿತರ ಪರವಾಗಿ ಕಾರ್ಯರ್ನಿಹಿಸಲು ನಮ್ಮಲ್ಲರಿಗೆ ಪ್ರೇರಣೆಯಾಗಿದೆ.
ಭಾರತ ದೇಶದ ಜನ 75ನೇಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಶತಮಾನೋತ್ಸವ ಪೂರೈಸಿ ದೇಶ ಹೇಗಿರಬೇಕೆಂಬ ಬಗ್ಗೆ ಯೋಚಿಸುತ್ತಿರುವುದು ಅವರ ದೂರದೃಷಿ ನಾಯಕತ್ವ ಎಂತಹದ್ದು ಎಂದು ತಿಳಿಯುತ್ತದೆ ಎಂದರು.
370 ಆರ್ಟಿಕಲ್ ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್ ರದ್ದು, ಉಚಿತ ಕೋವಿಡ್ ವ್ಯಾಕ್ಸಿನೇಷನ್, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುμÁ್ಮನ್ ಭಾರತ್ ಯೋಜನೆ, ಅಫ್ಘಾನಿಸ್ತಾನ ಮತ್ತು ಉಕ್ರೇನ್‍ನಿಂದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಆತ್ಮನಿರ್ಭರ ಭಾರತ, ಉಚಿತ ಗ್ಯಾಸ್ ಸಂಪರ್ಕ, ರಾಷ್ಟ್ರೀಯ ಶಿಕ್ಷಣ ನೀತಿ ಈ ರೀತಿ ಇಂತಹ ಅದ್ಬುತವಾದ ಕೊಡುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ನೂರುಕಾಲ ಬಾಳಬೇಕು, ಅವರ ಭವ್ಯಭಾರತ ಕನಸನ್ನು ನನಸಾಗಲಿ ಎಂದು ಶುಭ ಹಾರೈಸಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ರೋಟರಿ ಸಂಸ್ಥೆ ಅಧ್ಯಕ್ಷ ಸತೀಶ ನಾಡಗೌಡ, ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡಾಡಿ, ಸಾಯಿ ಸಮಿತಿ ಸದಸ್ಯ ಸುರೇಶ ಕಬ್ಬೂರ, ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ, ವೈಧ್ಯಾಧಿಕಾರಿ ಬಿ. ಆರ್. ಕಪ್ಪಲಗುದ್ದಿ, ಡಾ. ನಂದೀಶ ವರದಾಯಿ, ಪದಾಧಿಕಾರಿಗಳಾದ ಅಡಿವೆಪ್ಪ ಕುರಬೇಟ, ಬಸವರಾಜ ಗಾಡವಿ, ದುಂಡಪ್ಪ ನಿಂಗನ್ನವರ, ಮಹಾದೇವ ಮಸರಗುಪ್ಪಿ, ಪ್ರಭು ಹಿರೇಮಠ, ಈರಪ್ಪ ಢÀವಳೇಶ್ವರ, ಹಣಮಂತ ಗೋಡಿಗೌಡರ, ಹಣಮಂತ ಸಂಗಟಿ, ಶಿವಪ್ಪ ಬಿ.ಪಾಟೀಲ, ಶ್ರೀಶೈಲ ತುಪ್ಪದ, ಕಾಡೇಶ ಗೋರೋಶಿ, ರಾಮಲಿಂಗ ಬಿ.ಪಾಟೀಲ ಬಸಪ್ಪ ಕಡಾಡಿ, ಶಿವಾನಂದ ಹೆಬ್ಬಾಳ, ಜಗದೀಶ ಗೊರಗುದ್ದಿ, ಸುನೀಲ ಈರೇಶನವರ, ಹಣಮಂತ ಕೌಜಲಗಿ, ಅಜೀತ ಚಿಕ್ಕೋಡಿ ಸೇರಿದಂತೆ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎನ್.ಎಸ್,ಎಸ್ ಘಟಕದ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಸೇವಾ ಸಂಸ್ಥೆಯ ನಿರ್ದೇಶಕ ಪರಪ್ಪ ಗಿರೆಣ್ಣವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love

About inmudalgi

Check Also

ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ ಅಧ್ಯಕ್ಷರಾಗುವ ಮಾತೇ ಇಲ್ಲ – ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ: ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ