ಲಯನ್ಸ್ ಕ್ಲಬ್‍ದಿಂದ ಶಿಕ್ಷಕ ಪ್ರಶಸ್ತಿ ಪ್ರದಾನ
‘ಶಿಕ್ಷಕರು ದೇಶ ಕಟ್ಟುವ ನಿಜವಾದ ಶಿಲ್ಪಿಗಳು’
ಮೂಡಲಗಿ: ‘ಶಿಕ್ಷಕ ವೃತ್ತಿಯು ಪವಿತ್ರವಾಗಿದ್ದು, ಶಿಕ್ಷಕರು ದೇಶದ ಅಭಿವೃದ್ಧಿ ಹಾಗೂ ದೇಶ ಕಟ್ಟುವ ನಿಜವಾದ ಶಿಲ್ಪಿಗಳು’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಹೇಳಿದರು.
ಇಲ್ಲಿಯ ಹರ್ಷಾ ಸಾಂಸ್ಕøತಿಕ ಭವನದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಆಚರಿಸಿದ ಶಿಕ್ಷಕರ ದಿನಾಚರಣೆ ಹಾಗೂ ಲಯನ್ಸ್ ಕ್ಲಬ್ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರಶಸ್ತಿಗಳನ್ನು ಪಡೆಯುವ ಮೂಲಕ ಶಿಕ್ಷಕರ ಜವಾಬ್ದಾರಿಗಳು ಸಹ ಹೆಚ್ಚುತ್ತವೆ ಎಂದರು.
ಮುನ್ಯಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ವಿ. ಮಳಲಿ ಹಾಗೂ
ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿ ಲಯನ್ಸ್ ಕ್ಲಬ್ ಪರಿವಾರವು ಹಲವಾರು ಸಾಮಾಜಿಕ ಕಾರ್ಯಗಳ ಜೊತೆಗೆ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದರು.
ನಿವೃತ್ತ ಶಿಕ್ಷಕ ಬಸವರಾಜ ತರಕಾರ ಪ್ರಶಸ್ತಿ ಪುರಸ್ಕøತ ಶಿಕ್ಷಕರ ಪರಿಚಯವನ್ನು ಮಾಡಿದರು. ಬಾಲಶೇಖರ ಬಂದಿ ಮಾತನಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂಗಮೇಶ ಕೌಜಲಗಿ, ಖಜಾಂಚಿ ಶಿವಬೋಧ ಯರಜರವಿ, ಸಂಜಯ ಮೋಕಾಸಿ, ವೆಂಕಟೇಶ ಸೋನವಾಲಕರ, ಶ್ರೀಶೈಲ್ ಲೋಕನ್ನವರ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಗಿರೀಶ ಆಸಂಗಿ, ಪುಲಕೇಶ ಸೋನವಾಲಕರ, ಕೃಷ್ಣಾ ಕೆಂಪಸತ್ತಿ, ಶಿಕ್ಷಕರಾದ ಸಿ.ಎಸ್. ಮೋಹಿತೆ, ಎಸ್.ಪಿ. ಪಾಟೀಲ, ಎಚ್.ವೈ. ಕೋಟೂರ, ಕೆ.ಎಲ್. ಕುರಬೇಟ ಇದ್ದರು.
ಶಿವಾನಂದ ಕಿತ್ತೂರ ಸ್ವಾಗತಿಸಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು, ಸೋಮಶೇಖರ ಹಿರೇಮಠ ವಂದಿಸಿದರು.