Breaking News
Home / Recent Posts / ಉತ್ತರ ಪ್ರದೇಶದಲ್ಲಿ ಬಾಲಕೀಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಮನವಿ

ಉತ್ತರ ಪ್ರದೇಶದಲ್ಲಿ ಬಾಲಕೀಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಮನವಿ

Spread the love

ಉತ್ತರ ಪ್ರದೇಶದಲ್ಲಿ ಬಾಲಕೀಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಮನವಿ

ಮೂಡಲಗಿ: ಉತ್ತರ ಪ್ರದೇಶ ಲಖೀಂಪೂರ ಜಿಲ್ಲೆಯಲ್ಲಿ ದಲಿತ ಬಾಲಕಿಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸಿ ಗಲ್ಲಿಗೇರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮತ್ತು ಮುಡಲಗಿ-ಗೋಕಾಕ ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟವನ್ನು ಬಂದ ಮಾಡಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಯಶವಂತ ಮಂಟೂರ ಅವರ ನೇತೃತ್ವದಲ್ಲಿ ಪ್ರತಿಭಟಿಸಿ ತಹಶೀಲ್ದಾರ ಮೂಲಕ ಮನವಿಸಿ ಸಲ್ಲಿಸಿದರು.
ಪ್ರಕಾಶ ಮಾದರ ಮಾತನಾಡಿ, ಉತ್ತರ ಪ್ರದೇಶಲ್ಲಿ ದಲಿತ ಬಾಲಕಿಯನ್ನುಅಪಹರಿಸಿ ಹತ್ಯಾಚಾರ ಮಾಡಿ ಕೊಲೆ ಮಾಡಿರುವ ಸಂಗತಿ ಅತ್ಯಂತ ಹೇಯಕರ ಸಂಗತಿಯಾಗಿದ್ದು, ಇಡೀ ಮಾನವ ಕುಲಕ್ಕೆ ಕಳಂಕದಾಯಕ ಘಟನೆಯಾಗಿರುತ್ತೆ, ಈ ಘಟನೆಯಲ್ಲಿ ಭಾಗಿಯಾದ ಐದು ಜನ ಕೆಟ್ಟ ಕ್ರಿಮಿಗಳಂತೆ ವರ್ತಿಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ , ಎನ್ ಕೌಂಟರ ಮೂಲಕ ಅವರ ಜೀವ ತೆಗೆಯಬೇಕು ಇಲ್ಲವೇ ಗಲ್ಲಿಗೆ ಏರಿಸಬೇಕು ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಯಶವಂತ ಮಂಟೂರ, ಜಗದೀಶ ತೇಲಿ, ಕಲ್ಮೇಶ ಗೋಕಾಕ, ಪ್ರಶಾಂತ ದಳವಾಯಿ, ಮಾನಿಂಗ ಮಾದರ, ಅಶೋಕ ಜಗಿನ್ಯಾಥ, ನಾಗಪ್ಪ ಕರಬನ್ನವರ, ಚಿದಾನಂದ ಹರಿಜನ, ಲಕ್ಕವ್ವ ಮಂಟೂರ, ತಾಯವ್ವ ಕುಬಸನವರ, ಕಮಲವ್ವ ಕೆಸಗೋಪ್ಪ, ದುರಗಪ್ಪ ಮಾಂಗ, ಪರಶುರಾಮ ಮಾದರ, ಶಿವನಂದ ಹುಣಸಿಗಿಡದ, ಹನಮಂತ ಹಕ್ಕೆನವರ ಮತ್ತಿತರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ