ಮೂಡಲಗಿ : ಮೇ.17ರಂದು ಅಂಗನವಾಡಿ ಕೇಂದ್ರಗಳ ಪ್ರಾರಂಭೋತ್ಸವಕ್ಕೆ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮಕ್ಕೆ ಮೂಡಲಗಿ ವಲಯದ 411 ಅಂಗನವಾಡಿಗಳು, ಕಾರ್ಯಕರ್ತೆಯರು ಸಿದ್ಧಗೊಂಡಿದ್ದಾರೆ ಎಂದು ಸಿಡಿಪಿಒ ಯಲ್ಲಪ್ಪ ಗದಾಡಿ ಹೇಳಿದರು.
ರವಿವಾರದಂದ ಪ್ರತಿಕಾ ಪ್ರಕಟಣೆ ನೀಡಿದ ಅವರು, ಮಂಗಳವಾರದಂದು ಅಂಗನವಾಡಿ ಕೇಂದ್ರಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳಿಗೆ ಹೂವು ಕೊಟ್ಟು ಸ್ವಾಗತಿಸಲು ಕಾರ್ಯಕರ್ತೆಯರು ಸಜ್ಜಾಗಿದ್ದಾರೆ. ಮೇ 17ರಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪಾಲಕರೊಂದಿಗೆ ಮಕ್ಕಳನ್ನು ಕೇಂದ್ರಗಳಿಗೆ ಬರಮಾಡಿಕೊಂಡು, ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಗಳನ್ನು ಕರೆದು ಅಂಗನವಾಡಿ ಕೇಂದ್ರಗಳ ಪ್ರಾರಂಭೋತ್ಸವ ಕಾರ್ಯಕ್ರಮ ಮಾಡಲು ಈಗಾಗಲೇ ಎಲ್ಲ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
