Breaking News
Home / Recent Posts / ‘ರೈತರು ಮಣ್ಣಿನ ಫಲವತ್ತತೆಗೆ ಆದ್ಯತೆ ನೀಡಬೇಕು’

‘ರೈತರು ಮಣ್ಣಿನ ಫಲವತ್ತತೆಗೆ ಆದ್ಯತೆ ನೀಡಬೇಕು’

Spread the love

‘ರೈತರು ಮಣ್ಣಿನ ಫಲವತ್ತತೆಗೆ ಆದ್ಯತೆ ನೀಡಬೇಕು’

ಮೂಡಲಗಿ: ‘ರೈತರು ಭೂಮಿಯ ಮಣ್ಣನ್ನು ಹದಗೊಳಿಸಿ ಫಲವತ್ತತೆ ಹೆಚ್ಚಿಸಿದರೆ ಕಂಡಿತ ಉತ್ತಮ ಇಳುವರಿಯನು ಪಡೆಯಲು ಸಾಧ್ಯ’ ಎಂದು ಬೆಳಗಾವಿಯ ಬೆಳಗಾವಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯಲ್ಲಿ ಪ್ರಗತಿಪರ ರೈತ ಬಸವರಾಜ ಬಿ. ಬೆಳಕೂಡ ಅವರ ತೋಟದಲ್ಲಿ ಕಬ್ಬು, ಅರಿಸಿನ ಮತ್ತು ಸೋಯಾಬಿನ ಬೆಳೆಗಳ ಜಿಲ್ಲಾ ಮಟ್ಟದ ಕ್ಷೇತ್ರೋತ್ಸವ ಹಾಗೂ ಕಿಸಾನ ಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಣ್ಣು ರೈತನ ಕಣ್ಣು ಇದ್ದಂತೆ, ರೈತರು ಮಣ್ಣಿನ ಫಲವತ್ತತೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಕಲ್ಲೋಳಿಯ ರೈತ ಬಾಳಪ್ಪ ಬೆಳಕೂಡ ಅವರು ಭೂಮಿಯ ಫಲವತ್ತತೆಗೆ ಆದ್ಯತೆ ನೀಡಿದ್ದರಿಂದ ಎಕರೆಗೆ 120 ಟನ್ ಕಬ್ಬು ಬೆಳೆಯಲು ಸಾಧ್ಯವಾಗಿದೆ. ಅವರು ಮಾಡಿರುವ ಬೇಸಾಯವು ರೈತರಿಗೆ ಮಾದರಿಯಾಗಿದೆ ಎಂದರು.

ರೈತರು ಬೆಳೆಗಳಿಗೆ ಸೂರ್ಯನ ಬೆಳಕು, ಗಾಳಿ ಹಾಗೂ ನೀರಿನ ಪ್ರಮಾಣದ ನಿರ್ವಹಣೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಬದಲಾವಣೆಗೆ ತಕ್ಕಂತೆ ಮತ್ತು ಸಮಸ್ಯೆಗಳನ್ನು ಎದುರಿಸುವ ಶಕ್ತಿ ರೈತರು ಹೊಂದಿರಬೇಕು. ಆಧುನಿಕತೆಯ ವ್ಯವಸ್ಥೆಯಲ್ಲಿ ಬೆಳೆಗಳಲ್ಲಿ ಮೌಲ್ಯವರ್ಧನೆ ಅಳವಡಿಸುವಂತ ಜಾಣ ರೈತರಾಗಬೇಕು ಎಂದರು.
ಕ್ಷೇತ್ರೋತ್ಸವ ಉದ್ಘಾಟಿಸಿ ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎಂ.ಜಿ. ಕೆರುಟಗಿ ಕ್ಷೇತ್ರೋತ್ಸವವನ್ನು ಉಧ್ಘಾಟಿಸಿ ಮಾತನಾಡಿ ರೈತರು ಬೆಳೆಗಳ ಕ್ಷೇತ್ರೋತ್ಸವ ಮತ್ತು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸುವುದರಿಂದ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಬಹುದು. ರಾಸಾಯನಿಕ ಗೊಬ್ಬರವನ್ನು ಬಿಟ್ಟು ಸಾವಯವ ಕೃಷಿ ಅಳವಡಿಸಿಕೊಂಡು ಗುಣಮಟ್ಟದ ಬೆಳೆ ತೆಗೆದು ಸಮಾಜದ ಆರೋಗ್ಯ ಕಾಪಾಡಬೇಕು ಎಂದರು.
ಕ್ಷೇತ್ರೋತ್ಸವದ ಆತಿಥ್ಯವಹಿಸಿದ್ದ ಬಾಳಪ್ಪ ಬಿ. ಬೆಳಕೂಡ ಪ್ರಾಸ್ತಾವಿಕ ಮಾತನಾಡಿ ಕಬ್ಬು, ಅರಿಸಿನ ಮತ್ತು ಸೋಯಾಬಿನ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯುವಲ್ಲಿ ತಾವು ಭೂಮಿ ಸಿದ್ದತೆ, ನಾಟಿ ಮಾಡುವುದು ಹೀಗೆ ಎಲ್ಲ ಹಂತಗಳ ನಿರ್ವಹಣೆ ಬಗ್ಗೆ ರೈತರಿಗೆ ತಿಳಿಸಿದರು.
ಬಾಗೇವಾಡಿಯ ಸುಧೀರ ಕತ್ತಿ, ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ವಿ.ಟಿ. ಕುಲಕರ್ಣಿ, ಸಮೀರವಾಡಿ ಗೋದಾವಾರಿ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಎಸ್.ಎಂ. ಹುಕ್ಕೇರಿ ಮಾತನಾಡಿದರು.
ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಟಿ.ಎಸ್. ಮೋರೆ, ಚಿಕ್ಕೋಡಿ ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಐ. ರೂಡಗಿ, ನಿತೀನಕುಮಾರ ಪಾಟೀಲ,
ಉಪಪ್ರಧಾನ ವ್ಯವಸ್ಥಾಪಕ ಆರ್.ವಿ. ಕುಲಕರ್ಣಿ, ಸಿ.ಬಿ. ಪಾಶ್ಚಾಪುರ, ಕೃಷಿಕ ಸಮಾಜ ತಾಲ್ಲೂಕು ಅಧ್ಯಕ್ಷ ಅಶೋಕ ಗದಾಡಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಹಿರಿಯ ಸಹಾಯಕ ನಿರ್ದೇಶಕ ಎಂ.ಎಲ್. ಜನಮಟ್ಟಿ, ಕೃಷಿ ಅಧಿಕಾರಿ ರುಬೀನಾ ಖಾಜಾ, ಕೃಷಿಕ ಸಮಾಜದ ನಿಂಗಪ್ಪ ಮೀಸಿ, ಬಸರಗಿ, ವಿ.ಎಸ್. ಭುಜನ್ನವರ, ಬಸವರಾಜ ಬೆಳಕೂಡ ಇದ್ದರು.
ಬೆಳಗಾವಿ ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಗಳ ಒಂದು ಸಾವಿರಕ್ಕೂ ಅಧಿಕ ರೈತರು ಭಾಗವಹಿಸಿ ಕಬ್ಬು, ಅರಿಸಿನ ಮತ್ತು ಸೋಯಾಬಿನ್ ಬೆಳೆಯ ಪ್ರಾತ್ಯಕ್ಷತೆಯನ್ನು ವೀಕ್ಷಿಸಿದರು.
ರಮೇಶ ಭಾಗೋಜಿ ನಿರೂಪಿಸಿದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ