Breaking News
Home / Recent Posts / ಶಿಕ್ಷಣ ಇಲಾಖೆಯ ರಾಜ್ಯ ಪ್ರಶಸ್ತಿ ನಮ್ಮೂರಿಗೆ ಹೆಮ್ಮೆ- ವೆಂಕಟೇಶ್ವರ ಮಹಾರಾಜರು.

ಶಿಕ್ಷಣ ಇಲಾಖೆಯ ರಾಜ್ಯ ಪ್ರಶಸ್ತಿ ನಮ್ಮೂರಿಗೆ ಹೆಮ್ಮೆ- ವೆಂಕಟೇಶ್ವರ ಮಹಾರಾಜರು.

Spread the love

ಶಿಕ್ಷಣ ಇಲಾಖೆಯ ರಾಜ್ಯ ಪ್ರಶಸ್ತಿ ನಮ್ಮೂರಿಗೆ ಹೆಮ್ಮೆ- ವೆಂಕಟೇಶ್ವರ ಮಹಾರಾಜರು.


ರಾಮದುರ್ಗ: ಶಿಕ್ಷಣ ಕ್ಷೇತ್ರದಲ್ಲಿ ತೊಂಡಿಕಟ್ಟಿ ಗ್ರಾಮದವರಾದ ಎ.ವಿ.ಗಿರಣ್ಣವರ ಪ್ರಧಾನಗುರುಗಳಿಗೆ ಕರ್ನಾಟಕ ಸರ್ಕಾರದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಬಂದಿರುವದು ನಮ್ಮ ಗ್ರ‍್ರಾಮಕ್ಕೆ ಅಷ್ಟೇಲ್ಲದೆ ರಾಮದುರ್ಗ ತಾಲೂಕಿಗೆ ಕೀರ್ತಿ ತಂದಿದೆ ಎಂದು ತೊಂಡಿಕಟ್ಟಿಯ ಗಾಳೇಶ್ವರಮಠದ ವೆಂಕಟೇಶ ಮಹಾರಾಜರು ಹೇಳಿದರು.
ಮೂಡಲಗಿ ಶೈಕ್ಷಣಿಕ ವಲಯದ ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ಪ್ರಧಾನಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ತೊಂಡಿಕಟ್ಟಿ ಗ್ರಾಮದ ಎ.ವ್ಹಿ.ಗಿರೆಣ್ಣವರ ಈ ವರ್ಷದ ಕರ್ನಾಟಕ ಸರ್ಕಾರದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ತೊಂಡಿಕಟ್ಟಿ ಗ್ರಾಮದ ಸರ್ಕಾರಿ ಶಾಲೆ ಹಾಗೂ ಶ್ರೀ ಗಾಳೇಶ್ವರ ಮಠದ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಸಾನಿಧ್ಯವಹಿಸಿ ಮಾತನಾಡುತ್ತಿದ್ದ ಅವರು ಶಿಕ್ಷಕ ವೃತ್ತಿ ಪವಿತ್ರವಾದ ಕರ್ತವ್ಯ. ಇಂತಹ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ನಮ್ಮೂರಿನ ಎ.ವ್ಹಿ. ಗಿರೆಣ್ಣವರ ಗುರುಗಳು ನಮ್ಮೂರಿನ ಶಾಲೆಯಲ್ಲಿ ಕಲಿತು ನಮ್ಮೂರಿನ ಶಾಲಾ ಮಕ್ಕಳಿಗೆ ಸ್ಪೂರ್ತಿ ಆಗುವದರ ಜೊತೆಗೆ ನಮ್ಮ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಏಕೆಂದರೆ ಇಲ್ಲಿಯವರೆಗೂ ನಮ್ಮ ಗ್ರಾಮದವರು ಯಾರೂ ರಾಜ್ಯ ಮಟ್ಟದ ಸಾಧನೆ ಮಾಡಿ ಗುರುತಿಸಿಕೊಂಡಿರಲಿಲ್ಲ. ಹೀಗಿರುವಾಗ ಇದು ರಾಜ್ಯಮಟ್ಟದ ಪ್ರಶಸ್ತಿ ನಮ್ಮೂರಿನ ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲೆಯಾಗಿದೆ ಎಂದರು.
ಶ್ರೀಮಠದ ಹಾಗೂ ಗ್ರಾಮಸ್ಥರ ಶಿಕ್ಷಣ ಪ್ರೇಮಿಗಳ ಗೌರವ ಸ್ವೀಕರಿಸಿ ಎ.ವ್ಹಿ.ಗಿರೆಣ್ಣವರ ಮಾತನಾಡಿ, ನಮ್ಮ ವೃತ್ತಿ ಜೀವನ ಸಾಧನೆಯಲ್ಲಿ ವೃತ್ತಿ ನಿಷ್ಠೆ, ವೃತ್ತಿ ಗೌರವದೊಂದಿಗೆ ಸೇವೆ ಸಲ್ಲಿಸುತ್ತಿರುವಾಗ ಎಲ್ಲೆಡೆ ಪುರಸ್ಕಾರ ಗೌರವ ರಾಜ್ಯ ಮಟ್ಟದಲ್ಲಿ ಬಂದರೂ ಕೂಡ ನಮ್ಮ ಸ್ವಗ್ರಾಮದಲ್ಲಿ ಶ್ರೀಗಳ ನೇತೃತ್ವದಲ್ಲಿ ಗೌರವ ಪಡೆದುಕೊಂಡಿದ್ದು ತುಂಬಾ ಖುಷಿಯ ಜೊತೆಗೆ ಎಲ್ಲರೂ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಗೌರವ ಎಂದು ಬಾವಿಸುತ್ತೇನೆ. ಎಲ್ಲ ಗ್ರಾಮಸ್ಥರೂ ಕೂಡ ತಮ್ಮ ಮಕ್ಕಳ ಶಿಕ್ಷಣಕ್ಕೆ ಹಾಗೂ ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ರಾಮದುರ್ಗ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಮ್.ಎಸ್. ನಿಜಗುಲಿ ಮಾತನಾಡಿ, ಈ ಪುರಸ್ಕಾರ ನಮ್ಮ ತಾಲೂಕಿಗೆ ದೊಡ್ಡ ಗೌರವ. ಎಲ್ಲ ಶಿಕ್ಷ್ಷಕರಿಗೆ ಮಾದರಿಯಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಕ್ರಿಯಾಶೀಲತೆಯಿಂದ ಕೆಲಸಮಾಡಬೇಕು ಎಂದರು.
ಕಾರ್ಯಕ್ರಮವನ್ನು ಸಂಘಟಿಸಿ ಶಿಕ್ಷಕರಾದ ಸುರೇಶ ಹುಚ್ಚನ್ನವರ ಮತ್ತು ಪಿ.ಎನ್. ಕುಂಬಾರ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಶಸ್ತಿವಿಜೇತ ಶಿಕ್ಷಕರ ತಂದೆ ತಾಯಿಗಳನ್ನು ಮಠದವತಿಯಿಂದ ಗೌರವಿಸಲಾಯಿತು. ಹಾಗೂ ತುಕ್ಕಾನಟ್ಟಿ ಶಾಲೆಯವತಿಯಿಂದ ವೆಂಕಟೇಶ ಮಹಾರಾಜರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಹೊಸಕೋಟಿ ಸಿ.ಆರ್.ಪಿ. ಪಿ.ಎಲ್.ನಾಯಿಕ, ರಾಮದುಗ್ ಕಸಾಪ ಅಧ್ಯಕ್ಷ ಪಿ.ಬಿ.ಜಟಗನ್ನವರ ಆಯ್.ಎಮ್. ಪಾಟೀಲ, ಎಮ್.ಎ.ಬನ್ನೂರ, ವೆಂಕಣ್ಣ ಬಿರಾದಾರ, ತಿಮ್ಮಣ್ಣ ಚಿಕ್ಕೂರ, ಭೀಮಪ್ಪ ಗಿರೆಣ್ಣವರ, ಸುರೇಶ ಗಿರೆಣ್ಣವರ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಪಿ.ಟಿ.ತೋಳಮಟ್ಟಿ ನಿರೂಪಿಸಿ ವಂದಿಸಿದರು


Spread the love

About inmudalgi

Check Also

ಗಜಾನನ ಮನ್ನಿಕೇರಿ ಶಿಕ್ಷಣ ಇಲಾಖೆಯ ಗೌರವ ಹೆಚ್ಚಿಸಿದ್ದರು’ – ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ 

Spread the loveಗಜಾನನ ಮನ್ನಿಕೇರಿ ಅವರಿಗೆ ‘ಅಕ್ಷರದೊಳಗಿನ ನಕ್ಷತ್ರ’ ಅಭಿನಂದನಾ ಗಂಥ ಅರ್ಪಣೆ ‘ಗಜಾನನ ಮನ್ನಿಕೇರಿ ಶಿಕ್ಷಣ ಇಲಾಖೆಯ ಗೌರವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ