Breaking News
Home / Recent Posts / ಸಪ್ಟಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಸೇವಾ ಪಾಕ್ಷೀಕ ಅಭಿಯಾನ ಕಾರ್ಯಕ್ರಮ

ಸಪ್ಟಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಸೇವಾ ಪಾಕ್ಷೀಕ ಅಭಿಯಾನ ಕಾರ್ಯಕ್ರಮ

Spread the love

ಮೂಡಲಗಿ:  ಭಾರತ ದೆಶದ ಪ್ರಧಾನ ಮಂತ್ರಿ ನರೇಂದ್ರ ಮೊದಿ ಜನ್ಮದಿನದ ಪ್ರಯುಕ್ತ ಭಾರತಿಯ ಜನತಾ ಪಾರ್ಟಿ ಅರಬಾಂವಿ ಮಂಡಲ ಯುವಮೋರ್ಚಾ ವತಿಯಿಂದ ಸಪ್ಟಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಸೇವಾ ಪಾಕ್ಷೀಕ ಅಭಿಯಾನ ಕಾರ್ಯಕ್ರಮದ ಸಮಾರೂಪ ಸಮಾರಂಭ ಹಾಗೂ ಮಹತ್ಮಾ ಗಾಂಧಿ ಜಯಂತಿ ನಿಮಿತ್ಯ ಸ್ವಚತಾ ಅಭಿಯಾನ ಕಾರ್ಯಕ್ರಮವನ್ನು ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನೆರವೆರಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಯುವ ನಾಯಕ ಸರ್ವೊತ್ತಮ ಅಣ್ಣಾ ಜಾರಕಿಹೊಳಿ ಅವರು ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿ 15 ದಿನಗಳಿಂದ ಅರಬಾಂವಿ ಕ್ಷೇತ್ರದ್ಯಂತ ಕಾರ್ಯಕರ್ತರು ಪದಾಧಿಕಾರಿಗಳು ನಿರಂತರವಾಗಿ ಮಾಡಿದ ಸೇವಾ ಕಾರ್ಯ ಶ್ಲಾಘನಿಯವಾಗಿದೆ ಎಂದೂ ಹೇಳಿದರು.

ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ದುರದುಂಡಿ ಮಾತನಾಡಿ ನಮ್ಮ ಭಾಗದ ಶಾಸಕರು ಹಾಗೂ ಕೆ ಎಮ್ ಎಪ್ ಅಧ್ಯಕ್ಷರಾದ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಪದಾಧಿಕಾರಿಗಳು ಉತ್ತಮ ಸಂಘಟನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಜಿಲ್ಲಾ ಕಾರ್ಯದರ್ಶಿ ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರ ಆಪ್ತ ಸಹಾಯಕರಾದ ಅಬ್ದುಲ್ ಮಿರ್ಜಿನಾಯಕ ಅರಬಾಂವಿ ಮಂಡಲ ಅಧ್ಯಕ್ಷರಾದ ಮಹಾದೇವ ಶೇಕ್ಕಿ ಪ್ರಧಾನ ಕಾರ್ಯದರ್ಶಿ ಮಹಾತೆಂಶ ಕುಡಚಿ ಯುವಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ ಪಾಂಡು ಮಹೇಂದ್ರಕರ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಣ ಕತ್ತಿ ಪಿಕೆಪಿಎಸ್ ಮಾಜಿ ಅಧ್ಯಕ್ಷರಾದ ಹಣಮಂತ ತೆರದಾಳ ಹಿರಿಯರಾದ ಬಸಪ್ಪ ಸಂತಿ ಶಿವಪ್ಪಾ ಅಟಮಟ್ಟಿ ಮಹಾದೇವ ಹೊಸಟ್ಟಿ ಪ್ರದಿಪ್ ಪಾಲಬಾಂವಿ ಶಿವದುಂಡು ಕೊಂಗಾಲಿ ಶಂಕರ ಕುರಿಬಾಗಿ ಆನಂದ ಮೂಡಲಗಿ ಹಾಗೂ ಗ್ರಾಮದ ಯುವಕರು ಗುರು ಹಿರಿಯರು ಗಣ್ಯ ಮಾನ್ಯರು  ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ