ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ಇಂದು ಕೋರೋನಾ ಮಹಾಸ್ಫೋಟ ಸಂಭವಿಸಿದೆ.
inmudalgi
ಜೂನ್ 2, 2020
ತಾಲ್ಲೂಕು, ಬೆಳಗಾವಿ
ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 26 ಸೊಂಕಿತರು, ಬೆಳಗಾವಿ ವ್ಯಾಪ್ತಿಯಲ್ಲಿ 22 , ಹಾಗೂ ಮೂಡಲಗಿ ತಾಲ್ಲೂಕಿನ ಕಲ್ಲೊಳ್ಳಿ, ಮತ್ತು ಗೋಕಾಕ ತಾಲೂಕಿನ ಶಿಲ್ತಿಬಾಳಿ ಗ್ರಾಮದಲ್ಲಿ ತಲಾ ಒಬ್ಬರು ಸೊಂಕಿತರು ಪತ್ತೆಯಾಗಿದ್ದಾರೆ.
ಬೆಳಗಾವಿ ಸೇರಿದಂತೆ ಕರ್ನಾಟಕಕ್ಕೆ ಇಂದು ದೊಡ್ಡ ಕೊರೋನಾ ಶಾಕ್ ಉಂಟಾಗಿದೆ. ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ಇಂದು ಮಹಾಸ್ಫೋಟ ಸಂಭವಿಸಿದೆ.
ಉಡುಪಿಯಲ್ಲಿ 150, ಬೆಳಗಾವಿಯಲ್ಲಿ 51, ಕಲಬುರಗಿ 100 ಸೇರಿದಂತೆ ರಾಜ್ಯದಲ್ಲಿ ಒಟ್ಟೂ 388 ಜನರಿಗೆ ಕೋರೋನಾ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟೂ 3796 ಜನರಿಗೆ ಸೋಂಕು ತಗುಲಿದಂತಾಗಿದೆ.
ಬಹುತೇಕ ಜನರು ಕ್ವಾರಂಟೈನ್ ನಲ್ಲಿದ್ದವರೇ ಆಗಿರುವುದು. 363 ಜನರು ಮಹಾರಾಷ್ಟ್ರದಿಂದ ಹಿಂತಿರುಗಿ ಬಂದವರು.
ದಾವಣಗೆರೆಯಲ್ಲಿ 2.5 ತಿಂಗಳ ಮಗುವಿಗೂ ಕೊರೋನಾ ಸೋಂಕು ತಗುಲಿದೆ.
ಬೆಳಗಾವಿಯಲ್ಲಿ ಈವರೆಗೆ 211 ಜನರಿಗೆ ಸೋಂಕು ತಗುಲುದ್ದಿ, ಇನ್ನೂ 2109 ಜನರ ವರದಿ ಬರುವುದು ಬಾಕಿ ಇದೆ.