ಬನ್ನಿ ವೃಕ್ಷಕ್ಕೆ ಸಿಮೋಲಂಘನೆ ನೆರವೇರಿಸಿದ ಶ್ರೀದತ್ತಾತ್ರೇಯಬೋಧ ಶ್ರೀಗಳು
ಮೂಡಲಗಿ: ನವರಾತ್ರಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಪಟ್ಟಣದ ಶ್ರೀ ಶಿವಬೋಧರಂಗನ ಮಠದಲ್ಲಿ ಶ್ರೀ ಮಠದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿಗಳು ಬನ್ನಿ ವೃಕ್ಷಕ್ಕೆ ಸಿಮೋಲಂಘನೆ ನೆರವೇರಿಸಿ ಚಾಲನೆ ನೀಡಿದರು.
ಶ್ರೀ ಶಿವಬೋಧರಂಗ ಮಠದ ಆವರಣಕ್ಕೆ ಪಟ್ಟಣದ ಶ್ರೀ ರೇಣುಕಾಯಲ್ಲಮ್ಮದೇವಿ, ಶ್ರೀ ಕರೆಮ್ಮಾದೇವಿ, ಶ್ರೀ ದುರ್ಗಮ್ಮಾದೇವಿ, ಶ್ರೀ ಬೀರಪ್ಪ ದೇವರ ವಿವಿಧ ಪಲ್ಲಕ್ಕಿಗಳು ಆಗಮಿಸಿದ ಕೂಡಲೇ ಬನ್ನಿ ವೃಕ್ಷಕ್ಕೆ ಶ್ರೀ ದತ್ತಾತ್ತೇಯಬೋಧ ಸ್ವಾಮೀಜಿ ಮತ್ತು ಶ್ರೀ ಶ್ರೀಧರಬೋಧ ಶ್ರೀಗಳು ಸುಖ, ಸಮೃದ್ಧಿ, ಉತ್ತಮ ಮಳೆ, ಬೆಳೆ ತಾಯಿ ಚಾಮುಂಡೆಶ್ವರಿ ಕರುಣಿಸಲಿ ಎಂದು ವಿಧಿ ವಿಧಾನದೊಂದಿಗೆ ಪೂಜೆ ನೆರವೇರಿಸಿದರು. ಭಕ್ತರ ಸಮೂಹದ ಜಯಕಾರದೊಂದಿಗೆ ಬನ್ನಿ ವೃಕ್ಷಕ್ಕೆ ಐದು ಬಾರಿ ಖಡ್ಗ ಬಳಸಿ ಸಿಮೋಲಂಘನೆ ನೆರವೇರಿಸಿ ಬನ್ನಿ ಪಡೆದುಕೊಂಡು ಶ್ರೀ ಶಿಬೋಧರಂಗರ ಸನ್ನಿಧಾನಕ್ಕೆ ತೆರಳಿ ಬನ್ನಿ ಸರ್ಮಪಿಸಿ ನಂತರ ಶ್ರೀ ಮಠದ ಆವರಣಕ್ಕೆ ಆಗಮಿಸಿದ ವಿವಿಧ ದೇವರುಗಳಿಗೆ ಶ್ರೀ ದತ್ತಾತ್ರಯಬೋಧ ಶ್ರೀಗಳು ಮತ್ತು ಶ್ರೀ ಶ್ರೀಧರಬೋಧ ಶ್ರೀಗಳು ಬನ್ನಿ ಸಮರ್ಪಿಸಿ ನಂತರ ಭಕ್ತರಿಗೆ ಬಂಗಾರ ರೂಪದಲ್ಲಿ ಬನ್ನಿಯನ್ನು ನೀಡಿ ನಾವು ನೀವು ಬಂಗಾರದಂಗ ಇರೋನ ಎಂದು ದಸರಾ ಹಬ್ಬದ ಶುಭಕೋರಿದರು.
ಈ ಸಮಯದಲ್ಲಿ ಶ್ರೀ ಶ್ರೀಧರಬೋಧ ಶ್ರೀಗಳು, ಶ್ರೀಮಠದ ಅರ್ಚಕ ಶಂಕರ ದಿಕ್ಷೀತ, ಶಿವಬಸು ಮಲಗೌಡರ, ಶಂಕರ ಚಿಪ್ಪಲಕಟ್ಟಿ, ಬಸಪ್ಪಜ್ಜ ದುಪಾಟಿ ಮತ್ತು ವಿವಿಧ ದೇವಸ್ಥಾನಗಳ ಅರ್ಚಕರು ಸೇರಿದಂತೆ ಅನೇಕ ಭಕ್ತಾಧಿಗಳು ಭಾಗವಹಿಸಿ ಪರಸಪ್ಪರ ಬಂಗಾರ ವಿನಿಮಯ ಮಾಡಿಕೊಂಡು ನವರಾತ್ರಿಯ ಶುಭಕೋರಿದರು.