Breaking News
Home / Recent Posts / ಶ್ರೀ ಭಗೀರಥ ಯುವತಿ ಮಂಡಳಿ ಉದ್ಘಾಟನೆ

ಶ್ರೀ ಭಗೀರಥ ಯುವತಿ ಮಂಡಳಿ ಉದ್ಘಾಟನೆ

Spread the love

ಮೂಡಲಗಿ: ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರತಿಶತ 50 ರಷ್ಟು ಅವಕಾಶಗಳಿದ್ದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಮಾಜಿಕ ಸೇವೆ ಮತ್ತು ಸಂಘಟನೆ ಮಾಡಬೇಕೆಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು. ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದ ಶ್ರೀ ಭಗೀರಥ ಯುವತಿ ಮಂಡಲ ನೋಂದಣಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿ ಶ್ರೀ ಭಗೀರಥ ಯುವತಿ ಮಂಡಳಿ ಇವತ್ತು ಉದ್ಘಾಟನೆಯಾಗಿದ್ದು ಇದರ ಮುಖಾಂತರ ಹೊಲಿಗೆ ತರಬೇತಿ ಇನ್ನಿತರ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ಜೈ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘದ ಮುಖಾಂತರ ಜಿಲ್ಲೆ ರಾಜ್ಯ ರಾಷ್ಟ್ರಮಟ್ಟದ ಸಂಘಟನೆ ಮಾಡಿದ್ದೇವೆ ಅದೇ ರೀತಿ ಶ್ರೀ ಭಗೀರಥ ಯುವತಿ ಮಂಡಲ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಮಾಡಿ ಸಮಾಜದಲ್ಲಿ ಶೋಷಿತ ವರ್ಗದ ವರಿಗೆ ಅವಕಾಶ ಕಲ್ಪಿಸಿಕೊಡಲು ನಿಸ್ವಾರ್ಥ ಸೇವೆ ಮಾಡಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಸಂತಿ ತೇರದಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಎಲ್ಲಾ ರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಸಂಘದ ಅಧ್ಯಕ್ಷ ಕಸ್ತೂರಿ ಹೆಗ್ಗಾಣಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿ ಉತ್ತಮ ಸಂಘಟನೆ ಮಾಡುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಭಗೀರಥ ಯುವತಿ ಮಂಡಲದ ಅಧ್ಯಕ್ಷ ಕಸ್ತೂರಿ ಹೆಗ್ಗಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಒಬ್ಬ ಯಶಸ್ವಿ ಮಹಿಳೆಯ ಸಾಧನೆ ಮಾಡಬೇಕಾದರೆ ಪುರುಷರ ಸಹಕಾರ ಅತಿ ಅವಶ್ಯಕವಾಗಿದೆ ಹಾಗೂ ಮಹಿಳೆ ಅಬಲೆಯಲ್ಲ ಸಬಲೆ ಎಂದು ಹೇಳಿದರು.

ವೇದಿಕೆಯಲ್ಲಿ ತಾಲೂಕ ಪಂಚಾಯಿತಿ ಮಾಜಿ ಸದಸ್ಯ ಸವಿತಾ ಡಬ್ಬನವರ, ಸಿದ್ದಪ್ಪ ಮಗದುಮ, ಸಂಘದ ಕಾರ್ಯದರ್ಶಿ ಲಕ್ಷ್ಮಿ ಬೆಳಗಲಿ, ಶ್ರೀದೇವಿ ಮಗದುಮ, ಶಶಿಕಲಾ ಬೆಳಕ್ಕಿ, ಜಯಶ್ರೀ ಗೋಲಬಾವಿ, ಲಕ್ಷ್ಮಿ ಕುಲಗೋಡ, ರತ್ನಾ ರೋಡ್ಡನ್ನವರ, ಸರಸ್ವತಿ ದುರದುಂಡಿ, ಸ್ವಪ್ನ ರೋಡ್ಡನವರ, ಮಹಾದೇವಿ ಆಟಮಟ್ಟಿ, ಚೈತ್ರ ಗಿರಿಮಲ್ಲಯ್ಯಗೊಳ, ಸಂಗೀತ ಗೌರವಗೋಳ, ಬಂದವ್ವ ಕಾಗಿ ಮುಂತಾದವರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ