Breaking News
Home / Recent Posts / ನಾಳೆ ಸಂಪಿಗೆ ಕವನ ಸಂಕಲನ ಬಿಡುಗಡೆ

ನಾಳೆ ಸಂಪಿಗೆ ಕವನ ಸಂಕಲನ ಬಿಡುಗಡೆ

Spread the love

ನಾಳೆ ಸಂಪಿಗೆ ಕವನ ಸಂಕಲನ ಬಿಡುಗಡೆ

ಮುಡಲಗಿ: ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಕನ್ನಡ ಸಾಹಿತ್ಯ ಪರಿಷತ್ ಮತ್ತು ಚೈತನ್ಯ ಆಶ್ರಮ ವಸತಿ ಶಾಲೆ ಆಶ್ರಯದಲ್ಲಿ ನ.6 ರಂದು ಮುಂಜಾನೆ 10ಗಂಟೆಗೆ ಕವಿಗೋಷ್ಠಿ ಹಾಗೂ ಅಪ್ಪಣ್ಣ ಮೂಗಳಖೋಡ ಅವರು ರಚಿಸಿದ ಸಂಪಿಗೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ವಹಿಸುವರು. ಬೆಟಗೇರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಆರ್.ಎಸ್.ಅಳಗುಂಡಿ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಆಶಯ ನುಡಿ ಪ್ರಸ್ತುತ ಪಡಿಸುವರು. ಕವನ ಸಂಕಲನ ಬಿಡುಗಡೆ ಹಾಗೂ ಪರಿಚಯವನ್ನು ಬಿ.ಪಿ.ಬಂದಿ ನಡೆಸಿಕೊಡುವರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ, ಬಿಆರ್‍ಸಿ ವೈ.ಬಿ.ಪಾಟೀಲ, ಟಿ.ಬಿ.ಕೆಂಚರಡ್ಡಿ, ಎಸ್.ಎಮ್.ಕಮದಾಳ, ಡಿ.ಎಸ್.ಗೋಡಿಗೌಡರ, ಎಸ್.ಆರ್.ಬೆಳವಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಕಾರ್ಯದರ್ಶಿ ಅಣ್ಣಪ್ಪ ಒಂಟಗೋಡಿ ತಿಳಿಸಿದ್ದಾರೆ.

 


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ