Breaking News
Home / Recent Posts / ಸ್ವಚ್ಛತಾ ಜಾಗೃತಿ ಸ್ವಚ್ಛ ಭಾರತ ಪೋಸ್ಟರ್ಗಳನ್ನು ಹೊಲಿಗೆ ತರಬೇತಿ ಶಿಬಿರಾರ್ಥಿಗಳಿಗೆ ವಿತರಿಣೆ

ಸ್ವಚ್ಛತಾ ಜಾಗೃತಿ ಸ್ವಚ್ಛ ಭಾರತ ಪೋಸ್ಟರ್ಗಳನ್ನು ಹೊಲಿಗೆ ತರಬೇತಿ ಶಿಬಿರಾರ್ಥಿಗಳಿಗೆ ವಿತರಿಣೆ

Spread the love

ಮೂಡಲಗಿ: ರಾಷ್ಟ್ರೀಯತೆ ಸೌಹಾರ್ದತೆ ಭಾವೈಕತೆಯ ಸಲುವಾಗಿ ನಿರಂತರ ನಿಸ್ವಾರ್ಥ ಕಾರ್ಯ ಮತ್ತು ಸೇವೆ ಇಂದಿನ ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.

ಅವರು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಭಗೀರಥ ಯುವತಿ ಮಂಡಳ ಹಳ್ಳೂರ ಇವುಗಳ ಆಶ್ರಯದಲ್ಲಿ ಸ್ವಚ್ಛತಾ ಜಾಗೃತಿ ಸ್ವಚ್ಛ ಭಾರತ ಪೋಸ್ಟರ್ಗಳನ್ನು ಹೊಲಿಗೆ ತರಬೇತಿ ಶಿಬಿರಾರ್ಥಿಗಳಿಗೆ ವಿತರಿಸಿ ಮಾತನಾಡುತ್ತಾ ನಾವು ನಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ, ನೈಸರ್ಗಿಕ ಪರಿಸರವನ್ನು ನಿರ್ಮಿಸೋಣ ಹಾಗೂ ಹಸಿ ಕಸ ಒಣ ಕಸ ವಿಂಗಡನೆ ಮಾಡಿ ಸಂಗ್ರಹಿಸಿ ವ್ಯವಸ್ಥಿತ ಸ್ಥಳದಲ್ಲಿ ಅದನ್ನು ಹಾಕಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯವನ್ನು ಮಾಡಿದರೆ ಸುಂದರ ಸಮಾಜ ನಿರ್ಮಾಣ ಮಾಡಲಿಕ್ಕೆ ಅನುಕೂಲವಾಗುತ್ತದೆ ಎಂದು ಯುವಕರಿಗೆ ಕರೆ ನೀಡಿದರು.

ಶ್ರೀ ಭಗೀರಥ ಯುವತಿ ಮಂಡಳ ಅಧ್ಯಕ್ಷ ಕಸ್ತೂರಿ ಹೆಗ್ಗಾಣಿ ಮಾತನಾಡಿ ಮೊದಲು ನಾವು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸ್ವಚ್ಛವಾಗಿರಬೇಕು ಎಂದು ಮಹಿಳೆಯರಿಗೆ ತಿಳಿ ಹೇಳಿದರು. ಜಾಗೃತಿ ಅಭಿಯಾನ ಕಾರ್ಯಕ್ರದಲ್ಲಿ ಆಶಾ ರೊಡ್ಡಣ್ಣವರ, ಬಂದವ್ವ ಕಾಗೆ, ಸುಮತಿ ಕಲಬುರ್ಗಿ, ಸ್ವಪ್ನ ರೊಡ್ಡಣ್ಣವರ, ರಂಜಿತಾ ನಾಯಕ, ಚಿನ್ನವ್ವ ಗೋಲಬಾವಿ, ರೇಖಾ ಮರಿಚಂಡಿ ಮುಂತಾದವರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ