ಕನಕದಾಸರು ಧರ್ಮದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿದ ಶ್ರೇಷ್ಠ ಕೀರ್ತನಕಾರ -ಮಿಸಿನಾಯ್ಕ
ಮೂಡಲಗಿ :ಹರಿದಾಸ ಪರಂಪರೆಯನ್ನು ಬೆಳೆಸಿ ಅದರ ಮೂಲಕ ಭಕ್ತಿ, ತತ್ವ, ಧರ್ಮದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿದ ಶ್ರೇಷ್ಠ ಕೀರ್ತನಕಾರ ಕನಕದಾಸರು ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರೊ.ಎ.ಎಸ್.ಮಿಸಿನಾಯ್ಕ ಹೇಳಿದರು.
ಅವರು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ 535 ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎ.ಪಿ.ರಡ್ಡಿ ಮಾತನಾಡಿ, ಕನಕದಾಸರು ಕೀರ್ತನೆಯ ಕಣಜ ಎಂದು ನಾಮಾಂಕಿತರಾಗಿದ್ದರು ಎಂದರು.
ಪ್ರೊ.ಎಸ್.ಎಮ್.ಗುಜಗೊಂಡ, ಪ್ರೊ.ಎಸ್.ಎಲ್.ಚಿತ್ರಗಾರ, ಪ್ರೊ.ಎಸ್.ಬಿ.ಖೋತ, ಡಾ.ಬಿ.ಸಿ.ಪಾಟೀಲ, ಬಿ.ಎಮ್.ಬರಗಾಲಿ, ಭಾರತಿ ತಳವಾರ, ವೆಂಕಟೇಶ ಪಾಟೀಲ, ಮನೋಹರ ಲಮಾಣಿ ಉಪಸ್ಥಿತರಿದ್ದರು.
ಪ್ರೊ.ಜಿ.ವಿ.ನಾಗರಾಜ ನಿರೂಪಿಸಿದರು. ಪ್ರೊ.ಎಸ್.ಸಿ.ಮಂಟೂರ ವಮದಿಸಿದರು.
 IN MUDALGI Latest Kannada News
IN MUDALGI Latest Kannada News
				 
			 
		 
			 
						
					 
						
					 
						
					 
					
				