ನ.29 ರಂದು ವಿಶೇಷ ಅಗತ್ಯತೆವುಳ್ಳ ಮಕ್ಕಳ ವೈಧ್ಯಕೀಯ ತಪಾಸನಾ ಶಿಬಿರ
ಮೂಡಲಗಿ: ಸನ್.2022-23 ನೇ ಸಾಲಿನ 1 ರಿಂದ 10 ನೇ ತರಗತಿಯಲ್ಲಿರುವ ಮೂಡಲಗಿ ವಲಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ವಿಶೇಷ ಅಗತ್ಯತೆವುಳ್ಳ ಮಕ್ಕಳ ವೈಧ್ಯಕೀಯ ತಪಾಸನಾ ಶಿಬಿರವನ್ನು ನ.29 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5-30 ರ ವರೆಗೆ ನಾಗನೂರ ಪಟ್ಟಣದ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದ್ದು, ಅರ್ಹ ದೈಹಿಕ ನ್ಯೂನ್ಯತೆಯುಳ್ಳ, ಶ್ರವಣ ದೋಷ, ದೃಷ್ಠಿ ದೋಷ, ಬುದ್ದಿನ್ಯೂನ್ಯತೆ ಹಾಗೂ ಬಹು ವಿಕಲತೆ ಇತ್ಯಾದಿ ನ್ಯೂನ್ಯತೆಯುಳ್ಳ ಮಕ್ಕಳು ವೈಧ್ಯಕೀಯ ಮೌಲ್ಯಾಂಕನ ಶಿಬಿರಕ್ಕೆ ಹಾರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಿಇಓ ಅಜಿತ ಮನ್ನಿಕೇರಿ ತಿಳಿಸಿದ್ದಾರೆ.
IN MUDALGI Latest Kannada News