*ಡಿ.12 ರಂದು ಮೂಡಲಗಿಯಲ್ಲಿ ೨೯ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ*
ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ೨೯ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಸೋಮವಾರ ಡಿ.೧೨ ರಂದು ವಿವಿಧ ಧಾರ್ಮಿಕ ಕಾರ್ಯಕ್ರಗಳೊಂದಿಗೆ ಸಡಗರ ಸಂಭ್ರಮದಿಂದ ಜರುಗಲಿದೆ.
ಸೋಮವಾರ ಮಧ್ಯಾಹ್ನ ೨ ಘಂಟೆಯಿಂದ ಶ್ರೀ ಶಿವಬೋಧರಂಗ ಮಠದ ರಸ್ತೆಯ ಯಲ್ಲಮ್ಮದೇವಿ ದೇವಸ್ಥಾನದ ಹತ್ತಿರದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಿಂದ ಅಯ್ಯಪ್ಪಸ್ವಾಮಿಯ ಉತ್ಸವ ಹಾಗೂ ಅಯ್ಯಪ್ಪ ಸ್ವಾಮಿಯ ಭಾವಚಿತ್ರದ ಭವ್ಯ ಮೆರವಣಿಗೆಯೂ. ಕನ್ನಿ ಸ್ವಾಮಿಗಳ ಕುಂಭಮೇಳ ಮತ್ತು ಆನೆ ಮೇಲೆ ಅಂಬಾರಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿಯ ಭಾವಚಿತ್ರ ಹಾಗೂ ಮೂರ್ತಿಯ ಭವ್ಯ ಮೇರವಣಿಗೆಯು ಝಾಂಜಪಥಕ, ಸಾರವಾಡ ಗೊಂಬೆಗಳ ಕುಣಿತ ವಿವಿಧ ವಾದ್ಯ ಮೇಳದೊಂದಿಗೆ ಶ್ರೀ ಶಿವಬೋಧರಂಗ ಮಠ, ಸಂಗಪ್ಪನ ವೃತ್ತ, ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೇಮ್ಮಾದೇವಿ ವೃತ್ತಗಳ ಮಾರ್ಗವಾಗಿ ಬಸವೇಶ್ವರ ವೃತ್ತದ ಹತ್ತಿರದ ಬಸವ ಮಂಟಪದಲ್ಲಿರುವ ಸ್ವಾಮಿಯ ಸನ್ನಿಧಾನದವರಿಗೆ ಜರುಗುವುದು. ನಂತರ ಸಂಜೆ ೬-೦೦ ಗಂಟೆಯಿಂದ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರಗುವದು.
ಸಂಜೆ ೬ಕ್ಕೆ ಬಸವರಂಗ ಮಂಟಪದಲ್ಲಿ ಜರುಗುವ ಪೂಜಾ ಕಾರ್ಯಕ್ರಮದ ಸಾನಿಧ್ಯವನ್ನು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ, ಶ್ರೀಧರಬೋಧ ಸ್ವಾಮಿಜಿ, ಸುಣಧೋಳಿಯ ಶಿವಾನಂದ ಸ್ವಾಮಿಜಿ, ಮುನ್ಯಾಳ-ರಂಗಾಪೂರದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಅಯ್ಯಪ್ಪ ಸ್ವಾಮಿ ಸೇವಾ ಸಮೀತಿಯ ಬೆಳಗಾವಿ ಜಿಲ್ಲಾಧ್ಯಕ್ಷ ಮಾರುತಿ ಗುರುಸ್ವಾಮಿ, ಅತಿಥಿಗಳಾಗಿ ತಹಶೀಲ್ದಾರ ಡಿ.ಜಿ.ಮಹಾತ್, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಬಿ.ಇ.ಒ ಅಜೀತ ಮನ್ನಿಕೇರಿ, ಹೆಸ್ಕಾಂ ಅಧಿಕಾರಿ ಎಮ್.ಎಸ್.ನಾಗನ್ನವರ, ಪಿಎಸ್‌ಐ ಎಚ್.ವಾಯ್.ಬಾಲದಂಡಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಮತ್ತು ಪುರಸಭೆ ಸದಸ್ಯರು ಮತ್ತಿತರರು ಭಾಗವಹಿಸುವರು.
ಬೈಂದೂರದ ರಾಜು ಶೆಟ್ಟಿ ಗುರುಸ್ವಾಮಿ ಮತ್ತು ಸನ್ನಿಧಾನದ ೨೫ನೇ ವರ್ಷದ ಮಾಲಾಧಾರಿ ರವಿ ನೇಸೂರ ಗುರುಸ್ವಾಮಿ ಪೂಜೆ ನಡೆಸಿ ಕೊಡುವವರು ಮತ್ತು ವಿವಿಧ ಗ್ರಾಮಗಳ ಗುರುಸ್ವಾಮಿಗಳು ಮತ್ತು ಮಾಲಾಧಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಕಲ ಸದ್ಭಕ್ತರು ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆಯ ಹಾಗೂ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ ಅಯ್ಯಪ್ಪಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ರವಿ ನೇಸೂರ ಗುರುಸ್ವಾಮಿ ಮತ್ತು ಕೃಷ್ಣಾ ಗಿರೆಣ್ಣವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.