Breaking News
Home / ಬೆಳಗಾವಿ / ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ – ಬಿ.ಎಂ.ತುಬಾಕಿ

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ – ಬಿ.ಎಂ.ತುಬಾಕಿ

Spread the love

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ – ಬಿ.ಎಂ.ತುಬಾಕಿ

ಮೂಡಲಗಿ : ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ನಮ್ಮ ಪೂರ್ವಜರು ಕೆಲವೂಂದು ಅನುಭವದ ವಿಚಾರಗಳನ್ನು ಅನೇಕ ಸಂಶೋದನ್ಮಾತಕ ಕಲ್ಪನೆಗಳನ್ನು ಹಾಗೂ ತಮ್ಮ ಚಿಂತನೆಗಳನ್ನು ಸ್ಮಾರಕಗಳ ರೂಪದಲ್ಲಿ ಬಿಟ್ಟುಹೋಗಿದ್ದಾರೆ ಅವುಗಳು ಇವತ್ತು ಸರಿಯಾದ ರಕ್ಷಣೆ ಇಲ್ಲದೇ ಅವನತಿಗೊಳ್ಳುತ್ತಿದ್ದು ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗೂ ನಮ್ಮ ಸಂಸ್ಕøತಿಯ ಉಳಿವಿಗಾಗಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಪಟಗುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎಂ. ತುಬಾಕಿ ಹೇಳಿದರು.
ಮೂಡಲಗಿ ಸಮೀಪದ ಪಟಗುಂದಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆರ್. ಡಿ. ಎಸ್, ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಎನ್. ಎಸ್. ಎಸ್. ಶಿಬಿರದ ಐದನೇ ದಿನದ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿತ್ತಾ ಸ್ಮಾರಕಗಳು ನಮ್ಮ ನಿಷ್ಕಾಳಜಿಯಿಂದ ಅವನತಿಗೊಳ್ಳುತ್ತಿದ್ದು ನಮ್ಮ ಪೂರ್ವಜರ ಕಲೆ ಸಾಹಿತ್ಯ ಸಂಸ್ಕøತಿಯನ್ನು ಅಭಿವ್ಯಕ್ತಗೊಳಿಸುವಲ್ಲಿ ಸ್ಮಾರಕಗಳು ಪ್ರಮುಖಪಾತ್ರ ಹೊಂದಿರುತ್ತೇವೆ ಎಂದರು.


ಕಾಲೇಜಿನ ಸಂಯೋಜಕ ಸುಭಾಸ ಮಾಲೋಜಿ ಮಾತನಾಡಿ ಪುರಾತನ ಸ್ಮಾರಕಗಳು ನಮ್ಮ ಭಾರತದ ನಾಗರಿಕತೆಯ ಪ್ರತಿಬಿಂಬಗಳಾಗಿದ್ದು ಅವುಗಳಿಂದ ನಮ್ಮ ಪೂರ್ವಿಕರ ಜೀವನ ಮತ್ತು ಭಾರತದ ಭೌಗೋಳಿಕ ಚಿತ್ರಣದ ಅರಿವು ನಮಗೆ ಆಗುವದರಿಂದ ನಾವುಗಳನ್ನು ಸಂರಕ್ಷಣೆ ಮಾಡುವುದು ಅವಶ್ಯಕವಿದೆ ಎಂದರು.
ರಾಜಾಪೂರದ ಕಮತೆ ಪಿ ಯು ಕಾಲೇಜಿನ ಪ್ರಾಚಾರ್ಯ ಮಕ್ತುಮ್ ಪೀರಜಾದೆ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ನಮ್ಮ ಕಲೆ ಸಾಹಿತ್ಯ ಸಂಸ್ಕøತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಹಂಚಲು ಸ್ಮಾರಕಗಳು ಮಹತ್ವದ ಪಾತ್ರ ವಹಿಸುತ್ತೇವೆ ನಾವುಗಳು ಅಖಂಡ ಭಾರತದಲ್ಲಿ ಸರ್ವದರ್ಮ ಸಮನ್ವಯತೆಯ ಭಾವನಾತ್ಮಕತೆಯಿಂದ ಬದುಕಿಬಾಳಲು ನಮ್ಮ ಹಿರಿಯರು ಬಿಟ್ಟು ಹೋದ ಕುರುಹುಗಳೇ ಕಾರಣಗಳಾಗಿದ್ದು ಅವುಗಳ ರಕ್ಷಣೆ ಪ್ರತಿಯೊಬ್ಬ ಭಾರತೀಯ ಪ್ರಜೆಯದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಟಗುಂದಿಯ ಹಿರಿಯರಾದ ನೂರಅಹ್ಮದ್ ಪೀರಜಾದೆ ತವನಪ್ಪ ಬೋಳಿ, ವಿಠ್ಠಲ ತುಪ್ಪದ, ಉಪನ್ಯಾಸಕ ರಾಘವೇಂದ್ರ ಮುಕ್ಕುಂಧ, ಕವಿತಾ ಮಳಲಿ ಅಕ್ಷತಾ ಹೊಸಮನಿ ಜಿ.ಎಚ್. ಕಡಪಟ್ಟಿ ಎನ್.ಎಸ್.ಎಸ್. ಸಹಘಟಕಾಧಿಕಾರಿ ಬಿ.ಎಂ,ಕಬ್ಬೂರೆ ಮತ್ತಿತ್ತರರು ಹಾಜರಿದ್ದರು.
ಸಾಧಿಯಾ ಖಾಜಿ ನಿರೂಪಿಸಿದರು ಸವಿತಾ ಸುಳ್ಳನ್ನವರ ಸ್ವಾಗತಿಸಿದರು ಸುಕನ್ಯಾ ಬೋಳಿ ವಂದಿಸಿದರು.


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ