Breaking News
Home / Recent Posts / ಡಿ.28ರಂದು ವೆಂಕಟೇಶ ಆಸ್ಪತ್ರೆಯಲ್ಲಿ ಬೃಹತ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ- ಡಾವೀಣಾ ಕನಕರಡ್ಡಿ

ಡಿ.28ರಂದು ವೆಂಕಟೇಶ ಆಸ್ಪತ್ರೆಯಲ್ಲಿ ಬೃಹತ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ- ಡಾವೀಣಾ ಕನಕರಡ್ಡಿ

Spread the love

ಡಿ.28ರಂದು ವೆಂಕಟೇಶ ಆಸ್ಪತ್ರೆಯಲ್ಲಿ ಬೃಹತ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ- ಡಾವೀಣಾ ಕನಕರಡ್ಡಿ

ಮೂಡಲಗಿ: ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ತಾಲೂಕಿನ ಬಡ ಜನರಿಗೆ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ದಿ.ಶ್ರೀಮತಿ ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆ.ಚಾರಿಟೇಬಲ್ ಟ್ರಸ್ಟ ಗೋಕಾಕ ಹಾಗೂ ಪಟ್ಟಣದ ವೆಂಕಟೇಶ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಿಂದ ಡಿ.28ರಂದು ಮುಂಜಾನೆ 10ಗಂಟೆಯಿಂದ ಮೂಡಲಗಿ ಪಟ್ಟಣದ ವೆಂಕಟೇಶ ಆಸ್ಪತ್ರೆ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಾಗಿದೆ ಎಂದು ಡಾ. ವೀಣಾ ಕನಕರಡ್ಡಿ ಹೇಳಿದರು.
ಅವರು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಬಿರದಲ್ಲಿ ಹೃದಯ ಚಿಕಿತ್ಸೆ, ಸ್ತ್ರೀರೋಗ್ಯ ಚಿಕಿತ್ಸೆ, ಎಲುಬು ಮತ್ತು ಕೀಲುಗಳ ಚಿಕಿತ್ಸೆ, ಹೃದಯರೋಗ ಚಿಕಿತ್ಸೆ, ಮೂತ್ರಪಿಂಡ ಚಿಕಿತ್ಸೆ, ಲಿವರ್ ಹಾಗೂ ಕರಳುಬೇನೆ ಚಿಕಿತ್ಸೆ, ಕಿವಿ, ಮೂಗು, ಗಂಟಲು ಚಿಕಿತ್ಸೆ, ಮಧುವೇಹ ಚಿಕಿತ್ಸೆ, ನೇತ್ರ ಚಿಕಿತ್ಸೆ, ನರರೋಗ ಚಿಕಿತ್ಸೆ, ಚಿಕ್ಕಮಕ್ಕಳ ಶಸ್ತ್ರ ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ, ಅಗತ್ಯವಿದ್ದವರಿಗೆ ಉಚಿತ ರಕ್ತ ತಪಾಸಣೆ, ಇಸಿಜಿ ತಪಾಸಣೆ ಜೊತೆಗೆ ರಕ್ತ ದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಬಡ ಜನರು ಹಾಗೂ ಸಂಘ ಸಂಸ್ಥೆಗಳು ಉಚಿತ ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು.
ಅನೇಕ ವೈದ್ಯ ವೃಂದವು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಬಡವರ ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರವು ಉಪಯುಕ್ತವಾಗಿದ್ದು, ಕೋವಿಡ್ ನಂತರ ಆರೋಗ್ಯ ಸೇವೆಯಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಇಂತಹ ಉಚಿತ ಆರೋಗ್ಯ ಶಿಬಿರವನ್ನು ವೆಂಕಟೇಶ ಆಸ್ಪತ್ರೆಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯದಲ್ಲಿ ಮುಂದೆ ಬರಬಹುದಾದ ಸವಾಲುಗಳಿಗೆ ಇಂದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಇಂತಹ ಶಿಬಿರ ಸಹಕಾರಿಯಾಗಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ ಆಸ್ಪತೆಯ ಡಾ. ರಾಹುಲ ಬೆಳವಿ, ಡಾ. ಪ್ರವೀಣಕುಮಾರ ಹೊಂಗಲ್, ರಕ್ತ ತಪಾಸಣಾ ಕೇಂದ್ರದ ವರ್ದಮಾನ ಜೀರಾಳೆ ಇದ್ದರು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ