ಜ.1ರಿಂದ 3 ವರಿಗೆ ಪಿ.ಜಿ.ಹುಣಶ್ಯಾಳದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಅಪ್ಪನ ಜಾತ್ರೆ
ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಶೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜ.೧ ರಿಂದ ೩ ರವರಿಗೆ “ಅಪ್ಪನ ಜಾತ್ರೆ” ೨೪ನೇ ಸತ್ಸಂಗ ಮಹೋತ್ಸವ, ತೋಟ್ಟಿಲೋತ್ಸವ, ಶ್ರೀ ಸಿದ್ಧಲಿಂಗ ರಥೋತ್ಸವ ಕಾರ್ಯಕ್ರಮ ಜರುಗಲಿದೆ.
ಜ.೧ ರಂದು ಮುಂಜಾನೆ ಶ್ರೀ ಸಿದ್ಧಲಿಂಗ ಯತಿರಾಜ ಶ್ರೀಶಾಂಭವಿ ಮಾತೆಯ ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗೆ ರುದ್ರಾಭಿಷೇಕ ಮತ್ತು ಮುತೈದೆಯರ ಉಡಿ ತುಂಬುವುದು, ೧೦ ಗಂಟೆಗೆ ಓಂಕಾರ ಧ್ವಜಾರೋಹಣ ಹಾಗೂ ಶ್ರೀ ಸಿದ್ಧಲಿಂಗ ರಥದ ಕಳಸಾರೋಹಣ ಹಾಗೂ ೧೧ ಗಂಟೆಗೆ ಸಾಂಸ್ಕçತಿಕ ಸಿರಿ ಕಾರ್ಯಕ್ರಮ ಜರುಗಲಿದೆ. ಸಂಜೆ ೭ ಗಂಟೆಯಿAದ ಸತ್ಸಂಗ ಸಮ್ಮೇಳನ ಮತ್ತು ಶ್ರೀ ಸಿದ್ಧಲಿಂಗ ಯತಿರಾಜ ತೊಟ್ಟಿಲೋತ್ಸವ ಕಾರ್ಯಕ್ರಮ ವಿವಿಧ ಮಠಾಧೀಶ ಸಾನಿಧ್ಯದಲ್ಲಿ ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಜರುಗಲಿದೆ.
ಜ.೨ ರಂದು ಮುಂಜಾನೆ ೧೦ಕ್ಕೆ ವಿವಿಧ ಮಹಾತ್ಮರಿಂದ ಪ್ರವಚ, ಸಂಜೆ ೬-೩೦ಕ್ಕೆ ಪ್ರವಚನ ಮತ್ತು ಶ್ರೀ ನಿಜಗುಣ ದೇವರ ಶೃಂಗಾರ ಕಿರೀಟ ಪೂಜೆ ಕಾರ್ಯಕ್ರಮ ವಿವಿಧ ಮಠಾಧೀಶ ಸಾನಿಧ್ಯದಲ್ಲಿ ಮತ್ತು ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಜರುಗಲಿದೆ.
ಜ.೩ ರಂದು ಮುಂಜಾನೆ ೧೦ಕ್ಕೆ ಪ್ರವಚ ಮತ್ತು ಸನ್ಮಾನ ಹಾಗೂ ತುಲಾಭಾರ, ಕಿರೀಟಧಾರಣೆ ಕಾರ್ಯಕ್ರಮ, ಸಂಜೆ ೪ ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರರ ರಥೋತ್ಸವ ಜರುಗಲಿದೆ.
IN MUDALGI Latest Kannada News