ಕಾರ್ಗಿಲ್ ವಿಜಯ ದಿವಸದಂದು ನಿವೃತ್ತ ಸೈನಿಕರನ್ನು ಗೌರವಿಸಬೇಕೆಂದು ಆಗ್ರಹಿಸಿ ಮನವಿ
ಮೂಡಲಗಿ: ನಿವೃತ್ತಿ ಹೊದಿಂದ ಯೋಧರಿಗೆ ಆಯಾ ಪಂಚಾಯತ ವತಿಯಿಂದ ಪ್ರತಿ ವರ್ಷ ಕಾರ್ಗಿಲ್ ವಿಜಯ ದಿವಸದಂದು ಸತ್ಕರಿಸಿ ಗೌರವಿಸಬೇಕೆಂದು ಆಗ್ರಹಿಸಿ ಸೋಮವಾರದಂದು ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಜೈ ಹನುಮಾನ ಯುವ ಜನ ಸೇವಾ ಸಂಘದ ಪದಾಧಿಕಾರಿಗಳು ಕಲ್ಲೋಳಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜೈ ಹನುಮಾನ ಯುವ ಜನ ಸೇವಾ ಸಂಘದ ಅಧ್ಯಕ್ಷ ಪರಶುರಾಮ ಇಮಡೇರ ಮಾತನಾಡಿ, ಭಾರತಾಂಬೆ ಸೇವೆಯನ್ನು ತಮ್ಮ ಪ್ರಾಣದ ಹಂಗು ತೋರೆದು ರಕ್ಷಿಸುವಲ್ಲಿ ಯೋಧರ ಪಾತ್ರ ಬಹಳ ಪ್ರಾಮುಖ್ಯವಾದದ್ದು. ಯುದ್ಧ ಭೂಮಿಯಲ್ಲಿ ಹೋರಾಡಿ ತಮ್ಮ ಸೇವೆಯನ್ನು ಪೂರ್ಣಗೋಳಿಸಿ ತಮ್ಮ ತಮ್ಮ ಸ್ವ- ಗ್ರಾಮಕ್ಕೆ ಬಂದರೆ ನಿವೃತ್ತಿ ಹೊಂದಿದ ಯೋಧರು ತಮ್ಮ ಕುಟುಂಬದವರು ಸ್ನೇಹಿತರು ಖರ್ಚಿನಲ್ಲಿ ಸತ್ಕಾರ ಸಮಾರಂಭ ಕಾರ್ಯಕ್ರಮ ಆಯೋಜನೆಗೋಳಿಸುವದು ಕಂಡು ಬರುತ್ತದೆ. ಆದರಿಂದ ಪುರಸಭೆ, ಹಾಗೂ ಗ್ರಾಪಂ, ಪಟ್ಟಣ ಪಂಚಾಯಿತ ಮತ್ತು ತಾಲೂಕಾಡಳಿತದಿಂದ ನಿವೃತ್ತಿ ಯೋಧರಿಗೆ ಸನ್ಮಾನಿಸಿ ಗೌರವಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಮಹಾಂತೇಶ ಕಡಲಗಿ, ಪಾದಾಧಿಕಾರಿಗಳಾದ ಭೀಮಶಿ ಗೋಕಾಂವಿ, ರಾಜಪ್ಪಾ ಮಾವರಕರ, ಸಿದ್ದಪ್ಪಾ ಪೂಜೇರಿ, ಭೀಮಶಿ ಕಡಲಗಿ, ಸಿದ್ದಪ್ಪಾ ಉಮರಾಣಿ, ರಾಮಣ್ಣಾ ಕಾಡದವರ, ಹನಮಂತ ತೋಟಗಿ, ಪಾಡುರಂಗ ಬಡಿಗೇರ, ನಾಗರಾಜ ಕಲಾಲ, ಅನೀಲ ಖಾನಗೌಡ್ರ, ಮತ್ತು ಕಲ್ಲೋಳಿಯ ಉಪಸ್ಥಿತರಿದ್ದರು.