Breaking News
Home / Recent Posts / ವಿಶ್ವಕರ್ಮ ಸಮಾಜದ ಜನರನ್ನು ಒಗ್ಗೂಡಿಸುವ ಸಲುವಾಗಿ ಫೆ.14ರಂದು ಬೃಹತ ಸಮಾವೇಶ

ವಿಶ್ವಕರ್ಮ ಸಮಾಜದ ಜನರನ್ನು ಒಗ್ಗೂಡಿಸುವ ಸಲುವಾಗಿ ಫೆ.14ರಂದು ಬೃಹತ ಸಮಾವೇಶ

Spread the love

ಮೂಡಲಗಿ : ವಿಶ್ವಕರ್ಮ ಸಮಾಜದ ಜನರಿಗೆ ಸ್ಥಳೀಯ ಗ್ರಾಪಂ, ಪುಸರಭೆ, ಜಿಪಂ ಗಳಲ್ಲಿ ಸ್ಥಾನಮಾನ ನೀಡಬೇಕು ಹಾಗೂ ನಮ್ಮ ಸಮಾಜಕ್ಕೆ ಸರ್ಕಾರದಿಂದ ಬರುವಂತ ಸೌಲಭ್ಯಗಳ ಕುರಿತು ಸಮಾಜದ ಜನರಿಗೆ ಮಾಹಿತಿ ನೀಡಿ ಸಮಾಜದ ಜನರನ್ನು ಒಗ್ಗೂಡಿಸುವ ಸಲುವಾಗಿ ಫೆ.14ರಂದು ಪಟ್ಟಣದ ಬಸವ ಮಂಟಪದಲ್ಲಿ ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಗಜಾನನ ಪತ್ತಾರ ಹೇಳಿದರು.

ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀರಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮೀಜಿ, ಸವದತ್ತಿ ತಾಲೂಕಿನ ಚಿಕ್ಕುಂಬಿಯ ಅಭಿನವ ನಾಗಲಿಂಗ ಮಹಾಸ್ವಾಮಿಗಳು, ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು, ಸವದತ್ತಿ ತಾಲೂಕಿನ ಶಿರಸಂಗಿಯ ವಿಶ್ವಕರ್ಮ ವಿಕಾಸ ಸಂಸ್ಥೆಯ ಉಪಾಧ್ಯಕ್ಷ ಭಗವಂತ ಪತ್ತಾರ, ವಿಶ್ವಕರ್ಮ ವಿಕಾಸ ಸಂಸ್ಥೆಯ ಮಾಜಿ ಅಧ್ಯಕ್ಷ ಈಶ್ವರ ಬಡಿಗೇರ, ಪಟ್ಟಣದ ಕಾಳಿಕಾದೇವಿ ದೇವಸ್ಥಾನ ಕಮೀಟಿಯ ಅಧ್ಯಕ್ಷ ಶ್ರೀಕಾಂತ ಪತ್ತಾರ ಹಾಗೂ ಅನೇಕ ಅತಿಥಿಗಳು, ವಿವಿಧ ತಾಲೂಕಗಳಿಂದ ಸಮಾಜದ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವವರು ಎಂದರು.

ಬೆಳಗಾವಿಯ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಕಿರಿಯ ಸಹಾಯಕ ಬಸವಣ್ಣೆಪ್ಪ ಕಂಬಾರ ಅವರು ಸಮಾಜದ ಜನರನ್ನು ಉದ್ದೇಶಿಸಿ ಉಪನ್ಯಾಸ ನೀಡುವವರು. ಫೆ.14ರಂದು ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಧ್ವಜಾರೋಹಣ ನೆರವೇರಿಸಿದ ನಂತರ ದೇವಸ್ಥಾನದಿಂದ ಕಲ್ಮೇಶ್ವರ ವೃತ್ತ, ಸಂಗಪ್ಪನ ವೃತ್ತದ ಮಾರ್ಗವಾಗಿ ಬಸವ ಮಂಟಪದವರೆಗೆ ಕುಂಭ ಮೇಳ ಮೇರವಣಿಗೆ ಜರುಗುವುದು ಆದ್ದರಿಂದ ಸಮಾಜದ ಬಾಂಧವರು ಹೆಚ್ಚಿನ ಜನಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮೌನೇಶ ಪತ್ತಾರ, ವಿರುಪಾಕ್ಷ ಪತ್ತಾರ, ಕಾಳಿಕಾದೇವಿ ದೇವಸ್ಥಾನ ಕಮೀಟಿಯ ಅಧ್ಯಕ್ಷ ಶ್ರೀಕಾಂತ ಪತ್ತಾರ, ವಿರಣ್ಣಾ ಶಿಲ್ಪಿ, ಭಗವಂತ ಬಡಿಗೇರ, ರಾಜು ಬಡಿಗೇರ, ಅಶೋಕ ಬಡಿಗೇರ ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ