Breaking News
Home / Recent Posts / ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ- ಭೀಮಪ್ಪ ಗಡಾದ

ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ- ಭೀಮಪ್ಪ ಗಡಾದ

Spread the love

ಮೂಡಲಗಿ : ಅರಭಾಂವಿ ಕ್ಷೇತ್ರದಲ್ಲಿ ಸರಕಾರಕ್ಕ ಸೇರಿದ ಆಸ್ತಿಗಳ ಮೇಲೆ ಬಿಎಲ್‍ಜಿ ಎಂದು ಹಾಲಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಹೆಸರು ಬರೆಯುತ್ತಿದ್ದು ಇದನ್ನು ನೋಡುತ್ತಿದ್ದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ದಾಖಲೆಗಳ ಸಮೇತವಾಗಿ ದೂರು ನೀಡಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಹೇಳಿದರು.

ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹೀರವಾದ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತ ಅರಭಾಂವಿ ಕ್ಷೇತ್ರದಲ್ಲಿರುವ ಪ್ರತಿಯೊಂದು ಗ್ರಾಮಗಳಲ್ಲಿಯ ಸರಕಾರಿ ಶಾಲೆಗಳ ಕಂಪೌಂಡ, ಶೌಚಾಲಯ, ಮೂತ್ರಾಲಯ, ನೀರಿನ ಟ್ಯಾಂಕ್, ಜಲಕುಂಭಗಳು, ಬಸ್ ತಂಗುದಾನಗಳು, ಸಮುದಾಯ ಭವನಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳು ಸೇರಿದಂತೆ ಸರಕಾರದ ಅನುದಾನದಲ್ಲಿ ನಿರ್ಮಿಸಲಾದ ಕಟ್ಟಡಗಳ ಮೇಲೆ ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಇವರ ನಿರ್ದೇಶನದಂತೆ ಅವರ ಅಭಿಮಾನಿಗಳು ಬಿಎಲ್‍ಜಿ ಎಂದು ಬಣ್ಣದಿಂದ ಹೆಸರು ಬರೆಯುತ್ತಿದ್ದಾರೆ ಎಂದರು.

ಸರ್ಕಾರಕ್ಕೆ ಸೇರಿದ ಆಸ್ತಿಗಳ ಮೇಲೆ ಈ ರೀತಿಯಾಗಿ ಖಾಸಗಿ ವ್ಯಕ್ತಿಗಳ ಹೆಸರು ಬರೆಯುತ್ತಿರುವುದು ನಿಜವಾಗಿಯು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರೆ ತಪ್ಪಾಗಲಾರದು. ಎಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬಾಲಚಂದ್ರ ಜಾರಕಿಹೊಳಿಯವರು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಪುನಃ ಇದೇ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದ್ದು ಸರಕಾರಿ ಕಟ್ಟಡಗಳ ಮೇಲೆ ಈ ರೀತಿಯಾಗಿ ಬಿಎಲ್‍ಜಿ ಎಂದು ಹೆಸರು ಬರೆಸುತ್ತಿರುವುದು ಪ್ರತಿಯೊಬ್ಬ ಮತದಾರರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದಾಗಿದೆ ಕಾರಣ ಈ ಕುರಿತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರ ಕೂಡಲೇ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬರುವ ದಿನಗಳಲ್ಲಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸಕ ರಮೇಶ ಜಾರಕಿಹೊಳಿಯವರು ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಪಂಚಮಸಾಲಿಗಳಿಗೆ ನಾಯಿಗಳು ಇವೆ ಎಂದು ಹೇಳಿದರುವುದು ಖಂಡನೀಯವಾಗಿದ್ದು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ವಿಷಕನ್ಯೆ ಎಂದು ಹೇಳಿದರುವುದು ಮತ್ತು ಮತದಾರರಿಗೆ ಹಣದ ಆಮಿಷ ನೀಡಿರುವುದು ಅವರ ಶಾಸಕ ಸ್ಥಾನಕ್ಕೆ ಗೌರವ ತರುವಂತದ್ದಲ್ಲ ಎಂದು ಆಕ್ರೋಶ ವ್ಯಕ್ತಪಸಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ತೇರದಾಳ, ಮಲ್ಲಪ್ಪ ಮದಗುಣಕಿ, ಚನ್ನಪ್ಪ ಅಥಣಿ, ಬಾಳಪ್ಪ ಮುಗಳಖೋಡ ಇದ್ದರು.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ