ಮೂಡಲಗಿ: ಕೆ.ಎಲ್.ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕಾರ ಕೋರೆ ಅವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವದ ಅಂಗವಾಗಿ ಕೆ.ಎಲ್.ಇ ವಿಶ್ವವಿದ್ಯಾಲಯ, ಜವಾಹರಲಾಲ ನೇಹರು ವೈದ್ಯಕೀಯ ಹಾಗೂ ಪ್ರಭಾಕರ ಕೋರೆ ಆಸ್ಪತ್ರೆ, ವ್ಯದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ, ಬಸವೇಶ್ವರ ಶಿಕ್ಷಣ ಸಂಸ್ಥೆ ಮತ್ತು ಪ್ರಿಯದರ್ಶಿನಿ ಸಹಕಾರಿ ಪತ್ತಿನ ಸಂಘ ಕಲ್ಲೋಳಿ ಇವುಗಳ ಸಹಯೋಗದಲ್ಲಿ ಫೆ.14ರಂದು ಮುಂಜಾನೆ 10ಗಂಟೆಯಿಂದ ತಾಲೂಕಿನ ಕಲ್ಲೋಳಿ ಪಟ್ಟಣದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಾಗಿದೆ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆ ಮತ್ತು ಪ್ರಿಯದರ್ಶಿನಿ ಸಹಕಾರಿ ಪತ್ತಿನ ಸಂಘ ಅಧ್ಯಕ್ಷ ರಮೇಶ ಬೆಳಕೂಡ ಹೇಳಿದರು.
ಅವರು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಬಿರದಲ್ಲಿ ನ್ಯೂರೋಲಾಜಿ, ಕಾರ್ಡಿಯೋಲಜಿ, ಯುರೋಲಾಜಿ, ಸಜಿಕಲ್ ಅಂಕೋಲಾಜಿ, ಎಲುಬು ಮತ್ತು ಕೀಲುಗಳ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಸ್ತ್ರೀರೋಗ, ಚಿಕ್ಕಮಕ್ಕಳ ಚಿಕಿತ್ಸೆ, ಕಿವಿ, ಮೂಗು, ಗಂಟಲು ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ, ಉಚಿತ ರಕ್ತ ತಪಾಸಣೆ, ದಂತರೋಗ, ಇಸಿಜಿ ತಪಾಸಣೆ ಜೊತೆಗೆ ರಕ್ತ ದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಬಡ ಜನರು ಹಾಗೂ ಸಂಘ ಸಂಸ್ಥೆಗಳು ಉಚಿತ ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು.
ಕೆ.ಎಲ್.ಇ ಆಡಳಿತಧಿಕಾರಿ ಡಾ. ಅಲ್ಲಮಪ್ರಭು ಕಡಾಡಿ ಮಾತನಾಡಿ, ಶಿಬಿರದಲ್ಲಿ ಅನೇಕ ವೈದ್ಯ ವೃಂದವು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಬಡವರ ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರವು ಉಪಯುಕ್ತವಾಗಿದ್ದು, ಸರ್ಕಾರದ ವಿವಿಧ ಯೋಜನೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದು ಹಾಗೂ ಕಡ್ಡಾಯವಾಗಿ ಸಾರ್ವಜನಿಕರು ಆಧಾರ ಕಾರ್ಡ, ರೇಶನ್ ಕಾರ್ಡ ಝುರಾಕ್ಸ್ ತೆಗೆದುಕೊಂಡು ಶಿಬಿರದಲ್ಲಿ ಭಾಗಿಯಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕೆ.ಎಲ್.ಇ ಆಸ್ಪತ್ರೆಯ ಅಧಿಕಾರಿ ರಾಜು ಹಾದಿಮನಿ, ಪ್ರಿಯದರ್ಶಿನಿ ಸಹಕಾರಿ ಪತ್ತಿನ ಸಂಘದ ವ್ಯವಸ್ಥಾಪಕ ಮಂಜುನಾಥ ದೊಡ್ಡಹಟ್ಟಿ ಇದ್ದರು.
