Breaking News
Home / Recent Posts / ಫೆ.13ರಂದು ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಬೃಹತ ಸಮಾವೇಶ

ಫೆ.13ರಂದು ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಬೃಹತ ಸಮಾವೇಶ

Spread the love

ಮೂಡಲಗಿ : ಹಡಪದ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಬಹಳ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿಗಾಗಿ ನಮ್ಮ ಸಮಾಜದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ, ಫೆ.13ರಂದು ಪಟ್ಟಣದ ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಡಪದ ಸಮಾಜದ ತಾಲೂಕಾಧ್ಯಕ್ಷ ಶಿವಬೋಧ ಉದಗಟ್ಟಿ ಹೇಳಿದರು.

ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಡಪದ ಸಮಾಜದ ಜನರಿಗೋಸ್ಕರ ತಾಲೂಕಿನ ಪತ್ರಿ ಹಳ್ಳಿಗಳಲ್ಲಿ ಸಭಾಭವನ ನಿರ್ಮಾಣ, ಮೂಡಲಗಿ ಹಾಗೂ ಯಾದವಾಡ ಗ್ರಾಮದಲ್ಲಿ ಇರುವಂತ ಹಡಪದ ಅಪ್ಪಣ್ಣ ದೇವಸ್ಥಾನಕ್ಕೆ ಹೆಚ್ಚಿಗೆ ಅನುದಾನ ನೀಡಬೇಕು, ಹಡಪದ ಸಮಾಜದ ಜನರಿಗೆ ರಾಜಕೀಯವಾಗಿ ಹೆಚ್ಚಿಗೆ ಆಧ್ಯತೆ ನೀಡಬೇಕು ಹಾಗೂ ಯು.ಪಿ ಮತ್ತು ಬಿಹಾರಿ ಕಟಿಂಗ್ ಅಂಗಡಿಗಳ ಹಾವಳಿಯನ್ನು ತಪ್ಪಿಸಬೇಕೆಂದು ಆಗ್ರಹಿಸಿ ಸಮಾವೇಶವನ್ನು ಮಾಡಲಾಗುತ್ತಿದೆ ಎಂದರು.

ಪಟ್ಟಣದ ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣನವರ ದೇವಸ್ಥಾನದಲ್ಲಿ ಶರಣ ಸಂಸ್ಕøತಿ ಉತ್ವವದ ದಶಮಾನೋತ್ಸವದ ಜೊತೆಗೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಆದ್ದರಿಂದ ಸಮಾಜದ ಬಾಂಧವರು ಹೆಚ್ಚಿನ ಜನಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.

ತಾಲೂಕಾ ಹಡಪದ ಸಮಾಜದ ತಾಲೂಕಾ ಗೌರವಾಧ್ಯಕ್ಷ ಶಿವಬಸು ಸುಣಧೋಳಿ, ಸಾತಗೌಡ ನಾವಿ ಹಾಗೂ ಹಡಪದ ಸಮಾಜದ ಅಥಣಿ ತಾಲೂಕಾಧ್ಯಕ್ಷ ಶಿವಾನಂದ ಹೊನ್ನೂರ ಮಾತನಾಡಿ, ಸಮಾವೇಶದಲ್ಲಿ ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀರಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮೀಜಿ, ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಗಳು, ಬಸವ ಬೆಳವಿಯ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶರಣಬಸವ ದೇವರು, ಹುಕ್ಕೇರಿ-ಕ್ಯಾರಗುಡ್ಡದ ಇಂಚಗೇರಿ ಸಂಸ್ಥಾನ ಮಠದ ಅಭಿನವ ಮಂಜುನಾಥ ಮಹಾಸ್ವಾಮಿಗಳು, ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು, ತಾಲೂಕಾ ಹಡಪದ ಸಮಾಜದ ತಾಲೂಕಾ ಗೌರವಾಧ್ಯಕ್ಷ ಶಿವಬಸು ಸುಣಧೋಳಿ, ಮನಗೊಳಿಯ ಭೀಮಾ ಶಂಕರ ಶರಣರು, ದಾವಣಗೇರಿ ಬಸವ ಕಲಾಲೋಕದ ಶಶಿಧರ ಎಚ್, ಹಾಗೂ ಅನೇಕ ಅತಿಥಿಗಳು, ವಿವಿಧ ತಾಲೂಕಗಳಿಂದ ಸಮಾಜದ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವವರು ಆದ್ದರಿಂದ ಸಮಾಜದ ಬಾಂಧವರು ಹೆಚ್ಚಿನ ಜನಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀಕಾಂತ ನಾವಿ, ನಾಗಪ್ಪ ಹಡಪದ, ಕೃಷ್ಣಾ ನಾವಿ, ಉಮೇಶ ಹಡಪದ ಇದ್ದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ