ವಿದ್ಯುನ್ಮಾನ ಮತ ಯಂತ್ರವನ್ನು ವೀಕ್ಷಿಸಿದ ನ್ಯಾಯಾಧೀಶೆ ಜ್ಯೋತಿ ಪಾಟೀಲ
ಮೂಡಲಗಿ: ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಬರುವ ವಿಧಾನ ಸಭೆ ಸಾರ್ವತ್ರಿಕ ಚುನಾವಣಾ ನಿಮಿತ್ಯ ತೇರೆದಿರುವ ವಿದ್ಯುನ್ಮಾನ ಮತದಾನ ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ಮೂಡಲಗಿ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರು ಪ್ರಾತ್ಯಕ್ಷಿಯ ಮತ ಚಲಾಯಿಸುವ ಮೂಲಕ ವಿದ್ಯುನ್ಮಾನ್ ಮತ ಯಂತ್ರವನ್ನು ವೀಕ್ಷಿಸಿದರು.
ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೋಂಡ ಮಾತನಾಡಿ, ಮತದಾರರಲ್ಲಿ ಗೊಂದಲಗಲ ಪರಿಹಾರಕ್ಕಾಗಿ ಹಾಗೂ ಮಾದರಿ ಮತದಾನ ವಿವರಿಸುವ ಈ ಪ್ರಾತ್ಯಕ್ಷಿಕೆಯ ಪ್ರಯೋಜನವನ್ನು ಎಲ್ಲ ಮತದಾರರು ಪಡೆದುಕೊಂಡು ಇತರರಿಗೂ ಮಾಹಿತಿ ನೀಡಿ. ಹೆಚ್ಚಿನ ಸಂಖ್ಯೆಯಲ್ಲಿ ಮಾತದಾನ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಿದ ಅವರು ವಿದ್ಯುನ್ಮಾನ ಮತಯಂತ್ರ ಬಗ್ಗೆ ಮಾಹಿತಿಯನ್ನು ಚುನಾವಣೆ ನೀತಿ ಸಂಹಿತೆ ಜಾರಿಯಾಗುವರಿಗೂ ಅರಭಾವಿ ಕ್ಷೇತ್ರದಲ್ಲಿ ಪ್ರತಿ ಹಳ್ಳಿಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಮಯದಲ್ಲಿ ಅರಭಾವಿ ಮತಕ್ಷೇತ್ರದ ಸೇಕ್ಟರ ಅಧಿಕಾರಿಗಳಾದ ಬಿಇಒ ಅಜೀತ ಮನ್ನಿಕೇರಿ, ತಾ.ಪಂ ಇಒ ಎಫ್.ಜಿ.ಚಿನ್ನನವರ, ಸಿಡಿಪಿ ಯಲ್ಲಪ್ಪ ಗದಾಡಿ ಮತ್ತು ತಾಲೂಕಾ ಶಿರಸ್ತದಾರ ಪರಸಪ್ಪ ನಾಯಿಕ, ಚುನಾವಣಾ ವಿಷಯ ನಿರ್ವಾಹಕ ಪಿ.ಎಸ್.ಕುಂಬಾರ ಹಾಗೂ ಗೋಪಾಲ ಭಸ್ಮೆ ಮತ್ತಿತರರು ಇದ್ದರು.