Breaking News
Home / Recent Posts / ನೇತ್ರದಾನ ಹಾಗೂ ಅಂಗಾಂಗಳ ದಾನದ ಹೆಸರು ನೋಂದಣಿ ಕಾರ್ಯಕ್ರಮ

ನೇತ್ರದಾನ ಹಾಗೂ ಅಂಗಾಂಗಳ ದಾನದ ಹೆಸರು ನೋಂದಣಿ ಕಾರ್ಯಕ್ರಮ

Spread the love

ಮೂಡಲಗಿ : ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದ್ದು, ಕಣ್ಣುದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಲು ಬಾಲಚಂದ್ರಣ್ಣಾ ಜಾರಕಿಹೋಳಿಯವರ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳು ಪುನೀತ ರಾಜಕುಮಾರ ಹುಟ್ಟುಹಬ್ಬದ ನಿಮಿತ್ಯ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೋಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.

ಗುರುವಾರದಂದು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ರತ್ನ ಡಾ.ಪುನೀತ ರಾಜಕುಮಾರ ಹುಟ್ಟುಹಬ್ಬದ ಪ್ರಯುಕ್ತ ಬಾಲಚಂದ್ರಣ್ಣಾ ಜಾರಕಿಹೋಳಿಯವರ ಅಭಿಮಾನಿ ಬಳಗ ಹಾಗೂ ಅಪ್ಪು ಅಭಿಮಾನಿ ಬಳಗದ ಆಶ್ರಯದಲ್ಲಿ ಜರುಗಿದ, ನೇತ್ರದಾನ ಹಾಗೂ ಅಂಗಾಂಗಳ ದಾನದ ಹೆಸರು ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಣ್ಣುಗಳು ಅಮೂಲ್ಯ ಅಂಗಗಳು, ಕಣ್ಣುಗಳ ಆರೈಕೆಯಷ್ಟೇ ರಕ್ಷಣೆಯೂ ಮುಖ್ಯ. ಕಣ್ಣು ಇದ್ದವರು ಮಾತ್ರ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತಿಳಿಯಲು ಮತ್ತು ಪ್ರಕೃತಿಯ ಸೌಂದರ್ಯ ಸವಿಯಲು ಸಾಧ್ಯ. ನೇತ್ರದಾನಕ್ಕೆ ಮುಂದಾಗವ ಜನತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು ಎಂದು ಹೇಳಿದರು.

ತಹಶೀಲ್ದಾರ ಡಿ ಜಿ ಮಹಾತ್ ಮಾತನಾಡಿ, ಕೊರೋನಾದಂತಹ ಸಂದರ್ಭದಲ್ಲಿ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಸಾಕಷ್ಟು ಜನರಿಗೆ ಸಹಕಾರ ನೀಡಿ ಅವರ ಬದುಕಿಗೆ ಸಹಕಾರಿಯಾಗಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಅವರು ಅಭಿಮಾನಿಗಳು ಹಾಗೂ ಪುನೀತ ರಾಜಕುಮಾರ ಅಭಿಮಾನಿಗಳು ಮಾಡುತ್ತಿರುವ ಕಾರ್ಯ ಅಂಧರ ಬಾಳಿಗೆ ಸಹಕಾರಿಯಾಗಲಿ. ಪುನೀತ ರಾಜಕುಮಾರ ಮಾಡಿದಂತ ಕಾರ್ಯಗಳನ್ನು ನೋಡಿದಂತ ಜನರು ಇಂದು ಸ್ವಯಂ ಪ್ರೇರಿತವಾಗಿ ದಾನ ಮಾಡುತ್ತಿರುವುದರಿಂದ ಮುಂದಿನ ದಿನಮಾನಗಳಲ್ಲಿ ಇಡೀ ಭಾರತ ದೇಶದಲ್ಲಿ ಅಂಧತ್ವ ತೊಲಗಿಸಲು ಸಹಕಾರಿಯಾಗುತ್ತದೆ ಎಂದರು.

ಬಿಇಒ ಅಜೀತ ಮನ್ನಿಕೇರಿ ಮಾತನಾಡಿ ಮನುಷ್ಯನ ದೇಹಕ್ಕೆ ಸಾವು ಬರುತ್ತದೆ. ಕಣ್ಣಿಗೆ ಸಾವಿಲ್ಲ, ಮನುಷ್ಯನ ಸಾವಿನ ನಂತರ ಕಣ್ಣುಗಳನ್ನು ಸುಡದೆ ಅಥವಾ ಮಣ್ಣು ಮಾಡದೆ ಅಂಧರಿಗೆ ದಾನ ಮಾಡುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಿ. ಯಾವುದೇ ವಯೋಮಾನದವರು ನೇತ್ರದಾನ ಹಾಗೂ ಅಂಗಾಂಗಳ ದಾನ ಮಾಡಬಹುದು ಎಂದು ತಿಳಿಸಿ ಹೇಳಿದರು.

ನೇತ್ರದಾನ ಹಾಗೂ ಅಂಗಾಂಗಳ ದಾನದ ಹೆಸರು ನೋಂದಾವಣಿ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ, ಸುಮರು 100 ಜನರು ನೇತ್ರದಾನ ಹಾಗೂ 43 ಜನ ಸಂಪೂರ್ಣ ದೇಹದಾನ ಮಾಡಿ, ಹೆಸರು ನೋಂದಣಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಸಿಡಿಪಿಒ ಯಲ್ಲಪ್ಪ ಗದಾಡಿ, ತಾಪಂ ಕಾರ್ಯನಿರ್ವಹಕ ಅಧಿಕಾರಿ ಎಫ್ ಜಿ ಚಿನ್ನನ್ನವರ, ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ವೈದ್ಯಾಧಿಕಾರಿ ಭಾರತಿ ಕೋಣಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಎಚ್ ವೈ ಬಾಲದಂಡಿ, ಮುಖಂಡರಾದ ಮರೇಪ್ಪ ಮರೇಪ್ಪಗೋಳ, ಅನ್ವರ್ ನದಾಫ್, ಬಸು ಝಂಡೆಕುರುಬರ, ಪ್ರಕಾಶ ಮಾದರ, ಹಾಗೂ ಪುರಸಭೆ ಸದಸ್ಯರು ಹಾಗೂ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಶಿಬಿರಾಥಿಗಳು, ಬಾಲಚಂದ್ರಣ್ಣಾ ಜಾರಕಿಹೋಳಿ ಅಭಿಮಾನಿಗಳು ಮತ್ತು ಅಪ್ಪು ಅಭಿಮಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

About inmudalgi

Check Also

ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು – ಸದಾಶಿವ ಬೆಳಗಲಿ

Spread the love ಮೂಡಲಗಿ : ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ