Breaking News
Home / Recent Posts / ಮಾ.26ರಿಂದ ಪಟಗುಂದಿ ಬೋಳಿ ತೋಟದಲ್ಲಿ ವೇದಿ ಪ್ರತಿಷ್ಠಾ ಮಹಾಮಹೋತ್ಸವ

ಮಾ.26ರಿಂದ ಪಟಗುಂದಿ ಬೋಳಿ ತೋಟದಲ್ಲಿ ವೇದಿ ಪ್ರತಿಷ್ಠಾ ಮಹಾಮಹೋತ್ಸವ

Spread the love

ಮಾ.26ರಿಂದ ಪಟಗುಂದಿ ಬೋಳಿ ತೋಟದಲ್ಲಿ ವೇದಿ ಪ್ರತಿಷ್ಠಾ ಮಹಾಮಹೋತ್ಸವ

ಮೂಡಲಗಿ: ತಾಲೂಕಿನ ಪಟಗುಂದಿ ಗ್ರಾಮದ ಬೋಳಿ ತೋಟದ ಭ.ಶ್ರೀ 1008 ಶೀತಲನಾಥ ದಿಗಂಬರ ಜೈನಮಂದಿರ ಟ್ರಸ್ಟ್‍ದಿಂದ ಮಾರ್ಚ 26ರಿಂದ27ರ ವರೆಗೂ ಶ್ರೀ ಮದ್ದೇವಾಧಿದೇವ ಮೂಲನಾಯಕ ಶ್ರೀ 1008 ಶೀತಲನಾಥ ತೀರ್ಥಂಕರರ ಹಾಗೂ ಮಾನಸ್ತಂಭೋಪರಿ ಚತುರ್ಮುಖ ಶಿಖರದ ಜಿನಬಿಂಬದ ವೇದಿ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮ ಪಟಗುಂದಿ ಬೋಳಿ ತೋಟದ ಜೈನ ಮಂದಿರದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ ಎಂದು ಜೈನ ಸಮಾಜದ ಮುಖಂಡ ತವನಪ್ಪ ಹೊಸಮನಿ ಹೇಳಿದರು.
ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ 26 ರಂದು ಮುಂಜಾಣೆ 5 ಗಂಟೆಗೆ ಸುಪ್ರಭಾತ ನಾಂದಿಮಂಗಲ, 6ಕ್ಕೆ ಕಾಲ್ನಡಿಗೆಯಿಂದ ಯಜಮಾನರನ್ನು ಮಂದಿರಕ್ಕೆ ಕರೆತರುವುದು, ಯಜಮಾನರು, ಮಾತಾ-ಪಿತಾ, ಸುವರ್ಣ ಮುತ್ತೈದೆಯರು ಮತ್ತು ಕಮೀಟಿಯ ಎಲ್ಲ ಸದಸ್ಯರು ಮುನಿಗಳ ಮುಂದೆ ಪ್ರಮಾಣವಚನ ಸ್ವೀಕರಿಸುವರು, ನಂತರ ಮಂಟಪದಲ್ಲಿ ಧ್ವಜಾರೋಹಣ, ಮಂಟಪ ಮತ್ತು ವೇದಿಕೆ ಉದ್ಘಾಟನೆ, ಮಂಗಲ ಕಲಶ ಸ್ಥಾಪನಾ ಕಾರ್ಯಕ್ರಮ ಜರುಗುವುದು. 7ಕ್ಕೆ ಅಖಂಡ ಜ್ಯೋತಿ ಪ್ರಜ್ವಲನೆ, 7-30ಕ್ಕೆ ಪ್ರತಿಷ್ಠಾ ಜಿನಬಿಂಬ ಸ್ಥಾಪನೆ, ಮಂಗಲ ಕಲಶ ತರುವುದು, 9ಕ್ಕೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ ಪಟಣ, ನವಗ್ರಹ ವಿಧಾನ , ವಾಸ್ತು ವಿಧಾನ, ಧಾಮ ಸಂಪ್ರೋಕ್ಷಣೆ, ಚತುರ್ದಿಕ್ ಹೋಮ, ಆರಾಧನೆ, ಮಧ್ಯಾಹ್ನ 3ಕ್ಕೆ ಮುನಿಶ್ರೀಗಳಿಂದ ಧರ್ಮೋಪದೇಶ ಮತ್ತು ಸವಾಲುಗಳು ಜರುಗುವವು, ಸಂಜೆ 7ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವವು,
ಮಾ.27 ರಂದು 6 ಗಂಟೆಗೆ ಮಂದಿರಕ್ಕೆ ಕುಂಭಸಮೇತವಾಗಿ ಯಜಮಾನರನ್ನು ಕರೆತರುವುದು, ನಂತರ ಮಂತ್ರ ವಿನ್ಯಾಸ, 9ಕ್ಕೆ ಜಿನಬಿಂಬದ ಸ್ಥಾಪನೆ. ಆದಿವಾಸನ, 9-30ಕ್ಕೆ ಪಂಚಾಮೃತ ಅಭಿಷೇಕ, ಶಾಂತಿ ಮಂತ್ರ, 11 ಗಂಟೆಗೆ ಸರ್ವದೋಶ ಪ್ರಾಯಶ್ಚಿತ್ ವಿಧಾನ ಪ್ರಾರಂಭವಾಗುವುದು. ಮಧ್ಯಾಹ್ನ 3ಕ್ಕೆ ಮುನಿಶ್ರೀಗಳಿಂದ ಧರ್ಮೋಪದೇಶ, 4 ಗಂಟೆಗೆ ಶಿಖರ ಮತ್ತು ಮಾನಸ್ತಂಭದ ಪ್ರತಿಷ್ಠಿತ ಮೂರ್ತಿಗಳ ಮೇಲೆ ಮೊದಲ 108 ಕಳಶಗಳ ಮಹಾಭಿಷೇಕ ಜರುಗುವುದು, ಸಂಜೆ 5 ಗಂತೆಗೆ ಮುನಿಶ್ರೀಗಳಿಂದ ಆಶೀರ್ವಚನ, ಗುರುಗಳ ಸಂಘಪೂಜೆ, ಸತ್ಕಾರ ಸಮಾರಂಭ ಮತ್ತು ಧ್ವಜಾ ಅವರೋಹಣ, ಕಂಕಣ ವಿಮೋಚನೆ, ಆರತಿ ಮತ್ತು ವಿಸರ್ಜೆನೆ ಕಾರ್ಯಕ್ರಮ ಜರುಗುವವು ಹಾಗೂ ವಿಧಾನಕ್ಕೆ ಕುಳಿತುಕೊಳ್ಳುವವರು ಬಿಳಿ ಅಥವಾ ಕೇಸರಿ ಬಟ್ಟೆ ಧರಿಸಬೇಕು ಮತ್ತು ಅಷ್ಟಕ ಸಾಮಾಗ್ರಿಗಳನ್ನು ಜೈನ ಸಮಾಜದ ಬಂಧುಗಳು ತಾವೇ ತರಬೇಕು ಆದರಿಂದ ತಾಲೂಕಿನ ಜೈನ ಸಮಾಜದ ಭಾಂಧವರು ಈ ಎರಡು ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ತವನಪ್ಪ ಹೊಸಮನಿ ತಿಳಿಸಿದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡಾರ ಗುಂಡು ಬೋಳಿ, ಸಾವಂತ ಹೊಸಮನಿ ಇದ್ದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ