Breaking News
Home / Recent Posts / ಬೇಡಜಂಗಮ ಸಮಾಜ ಆಚರಿಸಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಬೇಡಜಂಗಮ ಸಮಾವೇಶ

ಬೇಡಜಂಗಮ ಸಮಾಜ ಆಚರಿಸಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಬೇಡಜಂಗಮ ಸಮಾವೇಶ

Spread the love

ಮೂಡಲಗಿ: ‘ವೀರಶೈವ ಲಿಂಗಾಯತರಲ್ಲಿ ಜಾತ್ಯಾತಿತೆಯನ್ನು ಮೊಟ್ಟ ಮೊದಲು ಪ್ರತಿಪಾದಿಸಿದವರು ಆದಿ ಜಗದ್ಗುರು ರೇಣುಕಾಚಾರ್ಯರು’ ಎಂದು ಬೆಳಗಾವಿಯ ಪ್ರೊ. ಸಿ.ಜಿ. ಪಾಟೀಲ ಹೇಳಿದರು.
ಸಾಮಾಜಿಕ ಸಮಾನತೆಯನ್ನು ಬೋಧಿಸಿದ ಮತ್ತು ಎಲ್ಲ ವರ್ಗಗಳ ಏಳ್ಗೆಯನ್ನು ಕಂಡ ಮಹಾನ ಸತ್ಪುರುಷರು’ ಎಂದು ಬೆಳಗಾವಿಯ ಸಿ.ಜಿ. ಪಾಟೀಲ ಹೇಳಿದರು.
ಇಲ್ಲಿಯ ಮೂಡಲಗಿ ತಾಲ್ಲೂಕು ಜಂಗಮ ಸಮಾಜದಿಂದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಹಾಗೂ ಮೂಡಲಗಿ ತಾಲ್ಲೂಕು ಜಂಗಮ ಸಮಾಜ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ರೇಣುಕಾಚಾರ್ಯರು ಸಾಮಾಜಿಕ ಸಮಾನತೆಯನ್ನು ಬೋಧಿಸಿ ಮತ್ತು ಎಲ್ಲ ವರ್ಗಗಳ ಏಳ್ಗೆಯನ್ನು ಕಂಡು ಮಹಾ ಮಹಾಮಹಿಮರಾಗಿದ್ದರು ಎಂದರು.
ರೇಣುಕಾಚಾರ್ಯರು ಸಾಮಾಜಿಕ ಸಮಾನತೆಯನ್ನು ಕೇವಲ ಉಪದೇಶದಿಂದ ಸಾಧಿಸಲಿಲ್ಲ ಆಚಾರಿಸುವ ಮೂಲಕ ಸಮಾಜದಲ್ಲಿ ಅನುಷ್ಠಾನಗೊಳಿಸಿದರು ಎಂದರು.
ಬಿಡಿಸಿಸಿ ಬ್ಯಾಂಕ್ ಸದಸ್ಯ ಸತೀಶ ಈರಪ್ಪ ಕಡಾಡಿ ಮಾತನಾಡಿ ಜಂಗಮ ಸಮಾಜದವರು ಸಂಘಟನೆ ಮತ್ತು ಒಗ್ಗಟ್ಟಿನ ಮೂಲಕ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು.
ಸಾನ್ನಿಧ್ಯವಹಿಸಿದ್ದ ಭಾಗೋಜಿಕೊಪ್ಪದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ಸರ್ಕಾರದ ಮೂಲಕ ಮಾಡುತ್ತಿರುವುದು ಸರ್ಕಾರವನ್ನು ಜಂಗಮ ಸಮಾಜದೆವರೆಲ್ಲರೂ ಅಭಿನಂದಿಸುತ್ತೇವೆ ಎಂದರು.
ಜಂಗಮ ಸಮಾಜದವರು ಸಂಘಟನೆಯ ಜೊತೆಗೆ ಒಳ್ಳೆಯ ಆಚಾರ, ವಿಚಾರಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಪಂಚಪೀಠಗಳ ಆರಾಧಕರಾಗಬೇಕು ಎಂದರು.
ಚನ್ನಮಲ್ಲಯ್ಯ ನಿರ್ವಾಣಿ ಅಧ್ಯಕ್ಷತೆವಹಿಸಿದ್ದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷ ರೇಣುಕಾ ಹಾದಿಮನಿ, ಬಿ.ಜಿ. ಗಡಾದ, ಚನಮಲ್ಲಯ್ಯ ಹಿರೇಮಠ, ಎನ್‍ಎಸ್‍ಎಫ್‍ದ ದಾಸಪ್ಪ ನಾಯ್ಕ, ಪ್ರಕಾಶ ಮಾದರ, ಶಂಕರಯ್ಯ ಹಿರೇಮಠ, ಮುತ್ತಪ್ಪ ಈರಪ್ಪನ್ನವರ, ಶಿವಲಿಂಗಪ್ಪ ತೇಲಿ, ವೀರಪಾಕ್ಷಯ್ಯ ಹಿರೇಮಠ, ಗಂಗಾಧರ ಹಿರೇಮಠ, ಸಂಗಪ್ಪ ಸೂರಣ್ಣವರ, ಮಲ್ಲಪ್ಪ ಮದಗುಣಕಿ, ವಿಲಾಸ ನಾಸಿ, ಚನ್ನಗೌಡ ಪಾಟೀಲ ಇದ್ದರು.
ಶಿವಾನಂದ ಹಿರೇಮಠ ಸ್ವಾಗತಿಸಿದರು, ಎಸ್.ಡಿ. ಹಿರೇಮಠ ನಿರೂಪಿಸಿದರು, ಸೋಮು ಹಿರೇಮಠ ವಂದಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ