ಮಾ.27ರಿಂದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ
ಮೂಡಲಗಿ: ಇಲ್ಲಿನ ಈರಣ್ಣ ನಗರ ಕೆ ಇ ಬಿ ಪ್ಲಾಟದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವವು ಮಾ.27 ರಿಂದ 28ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಮಾ.28 ರಂದು ಮುಂಜಾನೆ 10 ಗಂಟೆಗೆ ಶ್ರೀ ದುರ್ಗಾದೇವಿ ವಿಷೇಶ ಅಭಿಷೇಕ, ಪೂಜೆ ಜರುಗುವುದು, 12ಗಂಟೆಗೆ ಪಲ್ಲಕ್ಕಿ ಉತ್ಸವ ನಂತರ ಸತ್ಯವ್ವ ಹಾಲಪ್ಪ ಪೂಜೇರಿ ಇವರಿಂದ ಭಂಡಾರ ಹಾರುವುವುದು ಹಾಗೂ 2 ಗಂಟೆಗೆ ಅನ್ನಪ್ರಸಾದ ಜರುಗುವುದು.
ಮಾ. 27ರಂದು ಸಂಜೆ 7 ರಿಂದ 9ಗಂಟೆಯವರಿಗೆ ಶ್ರೀ ದುರ್ಗಾದೇವಿ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಜರಗುವುದು ರಾತ್ರಿ 10 ಗಂಟೆಗೆ ಜಾತ್ರಾಮಹೋತ್ಸವ ನಿಮಿತ್ಯ ರನ್ನಬೆಳಗಲಿಯ ಮಲ್ಲಿಕಾರ್ಜುನ ನ್ಯಾಟ ಸಂಘದಿಂದ ಹೆಣ್ಣು ಸಂಸಾರದ ಕಣ್ಣು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಶ್ರೀ ಶಿವಬೋಧರಂಗ ಸಿದ್ದ ಸಂಸ್ಥಾನ ಮಠದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ವಹಿಸುವರು, ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು, ಟ್ರಸ್ಟ್ ಕಮಿಟಿ ಅದ್ಯಕ್ಷ ಯಲ್ಲಪ್ಪ ಮಾನಕಪ್ಪಗೋಳ ಅಧ್ಯಕ್ಷತೆ ವಹಿಸುವರು,
ಮುಖ್ಯ ಅತಿಥಗಳಾಗಿ ಮಾಜಿ ಪುರಸಭೆ ಅದ್ಯಕ್ಷ ಆರ್ ಬಿ ಹಂದಿಗುಂದ, ಮಾಜಿ ಸದಸ್ಯ ಈರಪ್ಪ ಬನ್ನೂರ, ಡಿ ಎಸ್ ಎಸ್ ತಾಲೂಕಾ ಸಂಚಾಲಕ ಯಲ್ಲಪ್ಪ ಸಣ್ಣಕ್ಕಿ, ಹಾಗೂ ಮುಖಂಡರಾದ ರಮೇಶ ಸಣ್ಣಕ್ಕಿ, ಸುರೇಶ ಸಣ್ಣಕ್ಕಿ, ರವೀಂದ್ರ ಸಣ್ಣಕ್ಕಿ, ಶಾಬಪ್ಪ ಸಣ್ಣಕ್ಕಿ, ರಮೇಶ ಪಾಟೀಲ ಭಾಗವಹಿಸುವರು ಎಂದು ಸಂಘಟರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.