ಭಕ್ತಿಭಾವದಲ್ಲಿ ಸದಾಶಿವಯೋಗೀಶ್ವರ ರಥೋತ್ಸವ
ಮೂಡಲಗಿ: ತಾಲ್ಲೂಕಿನ ಮುನ್ಯಾಳ-ರಂಗಾಪುರದ ಸದಶಿವಯೋಗೀಶ್ವರ ಜಾತ್ರೆಯ ರಥೋತ್ಸವವು ಮಠದ ಪೀಠಾಧಿಪತಿ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿತು.
ಅಲಂಕೃತ ರಥದಲ್ಲಿ ಸಿದಾಶಿವಯೋಗೀಶ್ವರರ ಮೂರ್ತಿಯನ್ನ ಪ್ರತಷ್ಠಾಪಿಸಿ ಪೂಜೆಯನ್ನು ಸಲ್ಲಿಸಿ ಶ್ರೀಗಳ ರಥೋತ್ಸವದಕ್ಕ ಚಾಲನೆ ನೀಡಿದರು. ರಥವು ಬರುವ ದಾರಿಗೆ ಸೇರಿದ ಭಕ್ತರು ಹಣ್ಣು, ಹೂವು, ಬತ್ತಾಸು, ಕಾರೀಖು, ಕಾಯಿಗಳನ್ನು ಅರ್ಪಿಸಿದರು.
ಬೆಳಿಗ್ಗೆ ಮೂಲ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ಮುನ್ಯಾಳ, ರಂಗಾಪುರ, ಖಾನಟ್ಟಿ, ಮೂಡಲಗಿ, ಭಾಗೋಜಿಕೊಪ್ಪ ಸೇರಿದಂತೆ ವಿವಿಧಡೆಯಿಂದ ಸಾವಿರಾರು ಭಕ್ತರು ಭಾಗಿಯಾಗಿದ್ದರು.