ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ
ಮೂಡಲಗಿ: ಬುಧವಾದಂದು ಪಟ್ಟಣದ ಲಕ್ಷ್ಮೀ ನಗರದಲ್ಲಿನ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವವು, ಕಾಳಿಕಾ ಮಾತೆಗೆ ಅಭಿಷಕ, ವಿಶೇಷ ಪೂಜೆ, ಹೋಮ ಮಾಡುವುದರ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಜಯಂತ್ಯೋತ್ಸವ ನಿಮಿತ್ಯ ಶಂಕರಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಸಮಾಜದ ನೂರಾರು ಮಹಿಳೆಯರು ತೊಟ್ಟಿಲು ಕಟ್ಟಿ ಶಂಕರಾಚಾರ್ಯರ ನಾಮಕರಣ ಮಾಡಿದ್ದು ವಿಶೇಷವಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ವಿಶ್ವಕರ್ಮ ಸಮಾಜದ ಬಾಂಧವರು ಸೇರಿದಂತೆ ಪಟ್ಟಣದ ನೂರಾರು ಭಕ್ತಾದಿಗಳು ದೇವಿಯ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.
IN MUDALGI Latest Kannada News