ಮೂಡಲಗಿ: ಮನಿಗೊಂದು ಮರ ಊರಿಗೊಂದು ವನ ಗಿಡಗಳನ್ನು ಮಕ್ಕಳಂತೆ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಯುವಕರ ಕೈಯಲ್ಲಿ ಇದೆ ಎಂದು ಉಪ ವಲಯ ಅರಣ್ಯ ಅಧಿಕಾರಿ ಅಶೋಕ ಮಧುರಿ ಹೇಳಿದರು. ಅವರು ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ, ಅರಣ್ಯ ಇಲಾಖೆ ಗೋಕಾಕ ಹಾಗೂ ಪೂರ್ವಿ ಕ್ರೀಡಾ ಮತ್ತು ಸಾಂಸ್ಕೃತಿಕ ಯುವ ಸಂಘ ವಡೆರಹಟ್ಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಮಾತನಾತ್ತಾ ಮಾನವನ ಮನುಕುಲದ ಉಳಿವಿಗಾಗಿ ಸ್ವಚ್ಛ ಪರಿಸರ ಅತಿ ಅವಶ್ಯಕವಾಗಿದೆ ಎಂದು ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹಾಗೂ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಮಾತನಾಡಿ ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲಾ ಯುವಕ ಸಂಘದ ಪದಾಧಿಕಾರಿಗಳು ಸೇರಿಕೊಂಡು ಒಂದು ತಾಲೂಕಿಗೆ ನೂರರಂತೆ 100 ಜಿಲ್ಲೆಯಲ್ಲಿ 1000 ಗಿಡಗಳನ್ನು ಬೆಳೆಸುವ ಸಂಕಲ್ಪ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಅವುಗಳನ್ನು ವರ್ಷಪೂರ್ತಿ ನೀರು ಹಾಕಿ ಬೆಳೆಸಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು ಎಂದು ಹೇಳಿದರು. ಪೂರ್ವಿ ಕ್ರೀಡಾ ಮತ್ತು ಸಾಂಸ್ಕೃತಿಕ ಯುವ ಸಂಘದ ಅಧ್ಯಕ್ಷ ರಾಘವೇಂದ್ರ ದೊಡ್ಡವಾಡ ಮಾತನಾಡಿ ಉತ್ತಮ ಪರಿಸರ ನಿರ್ಮಾಣ ಮಾಡುತ್ತಿರುವ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಅವರ ಕಾರ್ಯ ಮತ್ತು ನಿಸ್ವಾರ್ಥ ಸೇವೆ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರೇಬೋಜಿ ಮಳಿವಡೆಯರ, ಗ್ರಾಮ ಲೆಕ್ಕಾಧಿಕಾರಿ ಸಂತೋಷ ಪಾಶ್ಚಪೂರ, ವಸತಿ ನಿಲಯದ ಮೇಲ್ವಿಚಾರಕ ರಾಜು ಗೊಲಬಾವಿ, ಕವನ ನಂದಿ, ಗೋಪಾಲಿ ಇರಗಾರ, ಕಿರಣ ಹಿರೇಹೊಳಿ, ನಾಗಪ್ಪ ಸಣ್ಣಪ್ಪನವರ, ಮಂಜುಳಾ ಕಂಬಾರ ಮುಂತಾದವರು ಉಪಸ್ಥಿತರಿದ್ದರು.