ಮೂಡಲಗಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸತತ ಪ್ರಯತ್ನ, ಸಮಯ ಪ್ರಜ್ಞೆ, ಏಕಾಗ್ರತೆಯನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಉತ್ತಮ ಗುರಿಯಿರಬೇಕು. ಗುರಿಯಿಲ್ಲದವನ ಜೀವನ ಚುಕ್ಕಾಣಿ ಇಲ್ಲದ ಹಡಗಿನಂತೆ ಎಂದು ಮೂಡಲಗಿ ಆರ್.ಡಿ.ಎಸ್ ಕಾಲೇಜಿನ ಉಪನ್ಯಾಸಕ ಹಾಗೂ ಸಾಹಿತಿ ಟಿ.ಎಸ್.ವಂಟಗೋಡಿ ಅಭಿಮತ ವ್ಯಕ್ತಪಡಿಸಿದರು.
ಅವರು ತಾಲೂಕಿನ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಕಲಾ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಸಾನ್ನಿಧ್ಯವಹಿಸಿದ್ದ ಶ್ರೀ ಜಡಿಸಿದ್ಧೇಶ್ವರ ಮಠದ ಪೀಠಾಧಿಪ ಶ್ರೀ ಶಿವಾನಂದ ಶ್ರೀಗಳು ಹಾಗೂ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸುರೇಶ ಬಿ.ಲಂಕೆಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳಾದ ರೋಮಿತಾ ಜಿಡ್ಡಿಮನಿ, ಜಯಶ್ರೀ ಹುಣಶ್ಯಾಳ, ಮುತ್ತವ್ವ ಸುಣಧೋಳಿ, ಅಕ್ಷತಾ ಪೂಜೇರಿ, ರಾಧಿಕಾ ಭಜಂತ್ರಿ, ಬೋರವ್ವ ಪೂಜೇರಿ, ಸುನಂದಾ ಕುರಿ ಅವರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಚ್.ಎಮ್.ಹತ್ತರಕಿ, ಎಸ್.ಡಿ.ವಾಲಿ, ಎ.ಕೆ.ಬಡಿಗೇರ, ಜಿ.ಜಿ.ನರಗುಂದ, ವಿ.ಪಿ ಉದ್ದನ್ನವರ, ಸಿ.ಎಸ್.ಪಾಟೀಲ, ರಾಜು ಕಿರಣಗಿ, ವಿದ್ಯಾರ್ಥಿ ಪ್ರತಿನಿಧಿಗಳಾದ ರಕ್ಷಿತಾ ಕುಲಗೋಡ, ಭಾಗಶ್ರಿ ಜಕಾತಿಮಠ, ಲಕ್ಷ್ಮೀ ಬಡಿಗೇರ, ಲಕ್ಷ್ಮೀ ದೇವರಮನಿ ಮತ್ತಿತರರು ಇದ್ದರು.
ಲಕ್ಷ್ಮೀ ನರಗುಂದ ನಿರೂಪಿಸಿದರು. ಸೃಷ್ಠಿ ನಾಯಕ ಸ್ವಾಗತಿಸಿ, ಸುಪ್ರಿಯಾ ಮನ್ನಾಪೂರ ವಂದಿಸಿದರು.
Home / Recent Posts / ಸತತ ಪ್ರಯತ್ನ, ಸಮಯ ಪ್ರಜ್ಞೆ, ಏಕಾಗ್ರತೆಯನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ- ಟಿ.ಎಸ್.ವಂಟಗೋಡಿ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …