*ಎಸ್ ಎಸ್ ಆರ್ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಮಾಸ್ಕ ವಿತರಣೆ*
ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳಿಗೆ ಮಾಸ್ಕ ವಿತರಿಸಿದ ಹಿರಿಯ ಪತ್ರಕರ್ತ ವಾಯ್ ವಾಯ್ ಸುಲ್ತಾನಪೂರ.
ಸ್ಥಳೀಯ ಮೂಡಲಗಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ಎಸೆಸೆಲ್ಸಿ ಪರೀಕ್ಷಾ ಕೇಂದ್ರದ ಪರಿಕ್ಷಾಥಿ೯ಗಳು ಮತ್ತು ಸಿಬ್ಬಂದಿ ವಗ೯ಕ್ಕೆ ಹಿರಿಯ ಪತ್ರಕರ್ತ ವಾಯ್ ವಾಯ್ ಸುಲ್ತಾನಪೂರ. 300 ಮಾಸ್ಕಗಳನ್ನು ನೀಡಿದ್ದಾರೆ.
ಬುಧವಾರ ರಂದು ಶಿಕ್ಷಣ ಸಂಸ್ಥೆಯ ಚೇಮ೯ನ್ ವಿಜಯಕುಮಾರ ಸೋನವಾಲ್ಕರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪತ್ರಕರ್ತ ವಾಯ್ ವಾಯ್ ಸುಲ್ತಾನಪೂರ್ ಮಾಸ್ಕ ವಿತರಿಸಿ ಮಾತನಾಡಿ ನಾನು ಈ ಸಂಸ್ಥೆಯ ಹಳೆಯ ವಿಧ್ಯಾರ್ಥಿಯಾಗಿದ್ದು 1970 – ರಿಂದ1973 ರವರೆಗೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೆನೆ ಅಲ್ಲದೆ ಈಗ ನನ್ನ ಮೋಮ್ಮಗಳಾದ ವೈಷ್ಣವಿ ಕೊಡಗನೂರ ಎಸ್ ಎಸ್ ಎಲ್ ಸಿ ರವರೆಗೆ ವ್ಯಾಸಂಗ ಮಾಡಿ ನಾಳೆಯಿಂದ ಪರೀಕ್ಷೆ ಬರೆಯುತ್ತಿದ್ದಾಳೆ ನನಗೆ ಮತ್ತು ನನ್ನ ಮಕ್ಕಳಿಗೆ, ಮೋಮ್ಮಗಳಿಗೆ ಅಕ್ಷರ ಜ್ಯಾನ ನೀಡಿದ ಈ ಶಾಲೆಗೆ 300 ಮಾಸ್ಕಗಳನ್ನು ನೀಡುವದರೊಂದಿಗೆ ನನ್ನ ಅಲ್ಪ ಕಾಣಿಕೆಯನ್ನು ಅಪಿ೯ಸುತ್ತಿದ್ದೆನೆ ಎಂದರು.
ಮುಖ್ಯೋಪಾಧ್ಯಾಯ ಎ ಆರ್ ಶೇಗುಣಸಿ ಗುರುಗಳು ಮಾಸ್ಕ ನೀಡಿದ ಸುಲ್ತಾನಪೂರ ಅವರು ನಮ್ಮ ಶಾಲೆಯ ಮೇಲೆ ಈಠ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ನಿದೆ೯ಶಕ ರವೀಂದ್ರ ಸೋನವಾಲ್ಕರ ನಿವೃತ್ತ ಶಿಕ್ಷಕರಾದ ಆರ್ ಟಿ ಲೆಂಕೆಪನವರ, ಶಿಕ್ಷಕರಾದ ಯು ಬಿ ದಳವಾಯಿ, ಎಸ್ ಎಸ್ ಕುರಣಿ , ಎಸ್ ಡಿ ತಳವಾರ , ಎಸ್ ಆರ್ ಗಲಗಲಿ, ಕೆ ಎಸ್ ಹೊಸಟ್ಟಿ , ಇನ್ನಿತರರು ಉಪಸ್ಥಿತರಿದ್ದರು.