ಮೂಡಲಗಿಯ ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕರ ಡಾ. ಮೋಹನ ಕಮತ ಅವರು ಮಂಗಳವಾರ ಹಸುವಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆ ನೀಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಚಾಲನೆ
ಮೂಡಲಗಿ: ಇಲ್ಲಿಯ ಪಶು ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣದ ಯೋಜನೆ ಅಡಿಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ರೋಗ ಲಸಿಕೆ ನೀಡುವುದರ ಮೂಲಕ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಹಾಗೂ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಎಂ.ಬಿ. ವಿಭೂತಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕಮತ ಅವರು ‘ಜಾನುವಾರುಗಳಿಗೆ ಕಾಲುಬಾಯಿ ರೋಗವನ್ನು ನಿಯಂತ್ರಣ ಮಾಡಲು ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು. ಉಚಿತವಾಗಿ ಅ. 25ರವರೆಗೆ ಎಲ್ಲ ದನ ಕರುಗಳಿಗೆ ನೀಡಲಾಗುತ್ತಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ಇದೇ ಸೆ. 28ರಿಂದ 15 ದಿನಗಳವರೆಗೆ ಮಿಶನ್ ರೆಬೀಸ್ ಅಡಿಯಲ್ಲಿ ಶ್ವಾನಗಳಿಗೆ ಉಚಿತ ಲಸಿಕೆಯನ್ನು ನೀಡಲಾಗುವುದು ಸಾರ್ವಜನಿಕರು ತಾವು ಸಾಕಿದ ಶ್ವಾನಗಳಿಗೆ ರೇಬೀಸ್ ಲಸಿಕೆಯನ್ನು ಹಾಕಿಸಿಕೊಳ್ಳಲು ಹೇಳಿದರು.
ಜಾನುವಾರುಗಳಿಗೆ ಚರ್ಮಗಂಟು ರೋಗವು ಮತ್ತೆ ಮರುಕಳಿಸಿದ್ದು, ಅದು ಹರಡದಂತೆ ಮತ್ತು ನಿಯಂತ್ರಿಸಲು ಈಗಾಗಲೇ ಪಶು ಇಲಾಖೆಯ ಸಿಬ್ಬಂದಿಯವರು ಸಮರೋಪಾದಿಂiÀiಲ್ಲಿ ಕಾರ್ಯಮಾಡುತ್ತಿದ್ದಾರೆ. ಚರ್ಮಗಂಟು ರೋಗ ಪೀಡಿತ ಹಸು ಮತ್ತು ಎತ್ತುಗಳ ತೀವ್ರ ನಿಗಾವಹಿಸಿ ಹರಡದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲ ಗ್ರಾಮಗಳಲ್ಲಿ ಪಾಗಿಂಗ್ ಮಾಡಲು ತಾಲ್ಲೂಕು ಪಂಚಾಯ್ತಿಯವರಿಗೆ ತಿಳಿಸಲಾಗಿದೆ ಎಂದರು.
ಕಳೆದ ಬಾರಿ ಎಲ್ಲ ಜಾನುವಾರುಗಳಿಗೆ ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ ಘೋಟ್‍ಫಾಕ್ಸ್ ಲಸಿಕೆ ನೀಡಲಾಗಿದೆ. ಈ ಬಾರಿಯೂ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಿದೆ. ಲಸಿಕೆ ಹಾಕಿಸಿಕೊಳ್ಳದ ಜಾನುವಾರ ಗುರುತಿಸಿ ಲಸಿಕೆ ನೀಡಲಾಗುತ್ತಿದೆ. ಸದಸ್ಯ ಮೂಡಲಗಿ ಆಸ್ಪತ್ರೆಯಲ್ಲಿ 3 ಸಾವಿರ ಡೋಜ್ ಘೋಟ್‍ಫಾಕ್ಸ್ ಲಸಿಕೆಯ ಸಂಗ್ರಹ ಇದೆ ಎಂದು ಹೇಳಿದರು.
ಚರ್ಮಗಂಟು ರೋಗವು ಈ ಬಾರಿಯ ಅಲೆಯು ಸೌಮ್ಯವಾಗಿದ್ದು ರೈತರು ಆತಂಕಪಡುವುದು ಬೇಡ. ರೋಗ ಲಕ್ಷಣ ಕಂಡುಬಂದರೆ ವೈದ್ಯರನ್ನು ಕಾಣಬೇಕು ಎಂದು ತಿಳಿಸಿದರು.
ಪಶು ವೈದ್ಯಾಧಿಕಾರಿಗಳಾದ ಡಾ. ಮಹಾದೇವಪ್ಪ ಕೌಜಲಗಿ, ಸುರೇಶ ಆದಪ್ಪಗೋಳ, ಮಹಾಂತೇಶ ಹೊಸೂರ, ಶಂಕರ ಶಾಬನ್ನವರ ಹಾಗೂ ಲಸಿಕಾ ಕಾರ್ಯಕರ್ತರು ಹಾಗೂ ರೈತರು ಇದ್ದರು.