Breaking News
Home / Recent Posts / ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳು ವಿವಿಧ ಬೇಡಿಕೆ

ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳು ವಿವಿಧ ಬೇಡಿಕೆ

Spread the love

ಮೂಡಲಗಿ: ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ತಾಲೂಕಾ ಘಟಕದ(ನ್ಯಾಯಬೆಲೆ ಅಂಗಡಿಗಳ ಮಾಲಿಕರು) ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಕ್ಕೆಗಾಗಿ ಆಗ್ರಹಿಸಿ ಶನಿವಾರದಂದು ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಸುನೀಲ ದೇಸಾಯಿ ಅವರ ಮೂಲಕ ಮುಖ್ಯ ಮಂತ್ರಿ ಸಿದ್ರಾಮಯ್ಯ ಅವರಿಗೆ ಮನವಿಸಲ್ಲಿಸಿದರು.
ಕಳೆದ ಹಲವು ವರ್ಷಗಳಿಂದ ಸರ್ಕಾರದ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆ ಜಾರಿ ಗೋಳಿಸುವ ನಿಟ್ಟಿನಲ್ಲಿ ರಾಜ್ಯದ ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ಬೆವರು ಸುರಿಸಿ ಕೆಲಸ ಮಾಡಿ ಇಲಾಖೆಯ ಯೋಜನೆಗಳ ಸಮರ್ಪಕ ನಿರ್ವಹಣೆಗಾಗಿ ದುಡಿಯುತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಇಲಾಖೆಯ ಹಲವು ನಿಯಮಗಳಿಂದ ನ್ಯಾಯ ಬೆಲೆ ಅಂಗಡಿ ಮಾಲೀಕರ ಬದುಕು ದುಸ್ತರಗೊಳಿಸುತ್ತೇವೆ. ಇಲಾಖೆಯ ಆಧುನಿಕ ತಂತ್ರಜ್ಞಾನ ಬಳಿಕ ಹಲವು ಸಮಸ್ಯೆಗಳನ್ನು ತಂತೊಡ್ಡಿದೆ, ಕಡಿಮೆ ಕಮೀಷನ್ ಜೀವನ ದುಸ್ತರವಾಗಿದೆ ಮೇಲಿಂದ ಮೇಲೆ ಸರ್ವರ್ ತೊಂದರೆ ನ್ಯಾಯ ಬೆಲೆ ಅಂಗಡಿ ಮಾಲೀಕರನ್ನು ಹೈರಾಣುಗೊಳಿಸಿದೆ ಹಾಗೂ ಹೀಗೂ ಕರ್ತವ್ಯ ನಿರ್ವಹಿಸಿ ಸೇವೆ ಸಲ್ಲಿಸುತ್ತಿರ ಬೇಕಾದರೆ ಇಲ್ಲಿಯವರೆಗೆ ಚಾಲ್ತಿಯಲ್ಲಿರುವ ಜಿಎಸ್‍ಸಿ ನಿರ್ವಹಣೆ ತಿದ್ದುಪಡ್ಡಿ ಇಕೆವ್ಯಸಿ ಕಾರ್ಯ ನ್ಯಾಯಬೆಲೆ ಅಂಗಡಿ ಮಾಲೀಕರ ಮುಖೇನ ಜರಗುತ್ತಿದ್ದ ಕೆಲಸ ಕಾರ್ಯವನ್ನು ಹಠಾತ್ ಸರ್ಕಾರಿ ಇನ್ನಿತರ ಸಂಸ್ಥೆಗಳಿಗೆ ವರ್ಗಾವಣೆ ಮಾಡಿರುವುದು ಅಲ್ಪ ಆದಾಯದಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದು ನ್ಯಾಬೆಲೆ ಅಂಗಡಿ ಮಾಲೀಕರ ಜೀವನ ನಿರ್ವಹಣೆ ಇನ್ನಷ್ಟು ಚಿಂತಾಜನಕವಾಗಿದೆ. ಸರ್ಕಾರ ಕೂಡಲೆ ಜಿಎಸ್‍ಸಿ ನಿರ್ವಹಣೆ ಕಾರ್ಯ ತಿದ್ದುಪಡೆ ಇಕೆವೈಸಿ ಮುಂತಾದ ಆಹಾರ ಇಲಾಖೆ ಸಂಭದ್ದಿಸಿದ ಎಲ್ಲಾ ಕೆಲಸ ಕಾರ್ಯಗಳನ್ನು ನ್ಯಾಯ ಬೆಲೆ ಅಂಗಡಿ ಮಾಲೀಕರ ಮುಖಾಂತರ ಜರುಗಿಸಲು ಕ್ರಮ ಕೈಗೊಳ್ಳಬೇಕು,
ಹಲವು ತಿಂಗಳುಗಳಿಂದ ಬಾಕಿ ಹೆಚ್ಚುವರಿ 24 ರೂಪಾಯಿ ಕಮೀಷನ್ ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿ ತಿಂಗಳು ಕಮೀಷನ್ ಪಾವತಿ ಮಾಡಬೇಕು ಹಿಂದಿನ ಇಕೆವೈಸಿ ಕೆಲಸ ಮಾಡಿರುವ ಬಾಕಿ ಹಣ ಬಿಡುಗಡೆ ಮಾಡಬೇಕು ಹಾಗೂ ಹಣದ ಬದಲಾಗಿ 10 ಕೆಜಿ ಅಕ್ಕಿ ನೀಡಬೇಕು ಇಲ್ಲದಿದ್ದರೆ 170 ಕಮೀಷನ್ ನೀಡಬೇಕು, ತಿಂಗಳಿಗೆ ಸರಿಯಾಗಿ ಕಮೀಷನ್ ನೀಡಬೇಕು, ಇಕೆವೈಸಿ ಕಮಿಷನ್ ಬಿಡುಗಡೆ ಮಾಡಬೇಕು, ಪೆÇೀರ್ಟೇಬಿಲಿಟಿ ಇರುವದರಿಂದ ಹೆಚ್ಚುವರಿ ಆಹಾರ ಧಾನ್ಯ ಪೂರೈಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.

ಈ ಸಮಯದಲ್ಲಿ ಸಂಘದ ಮುಡಲಗಿ ತಾಲೂಕ ಘಟಕದ ಅಧ್ಯಕ್ಷ ಮಾರುತಿ ಕರಬನ್ನವರ, ಉಪಾಧ್ಯಕ್ಷ ಎಂ. ಎಂ . ಪಾಟೀಲ, ಖಜಾಂಚಿ ರಾಮಚಂದ್ರ ದಾಬೋಜಿ, ನಿರ್ದೇಶಕರಾದ ಸುರೇಶ ನಿಡಗುಂದಿ, ರಮೇಶ ಸಣ್ಣಕ್ಕಿ, ಯಲ್ಲಪ್ಪ ಸಣ್ಣಕ್ಕಿ, ಸಚೀನ ಹಿರೇಮಠ, ಬಸವರಾಜ ಯರಗುದ್ರಿ, ಶ್ರೀಶೈಲ ಹಳ್ಳೂರ, ಸುಭಾಸ ಯಡ್ರಾವಿ, ಅನೀಲ ಕೆಂಪಸತ್ತಿ, ಮಲ್ಲು ಕೊಳವಿ, ಬಸವರಾಜ ಶ್ಯಾಬನ್ನವರ, ನಿಂಗಪ್ಪ ಬಗಲಿ, ಹಣಮಂತ ಗಂಗನ್ನವರ, ರಮೇಶ ಗೊಸಬಾಳ, ಪುಂಡಲೀಕ ಅರಭಾವಿ ಉಪಸ್ಥಿತರಿದ್ದರು


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ