Breaking News
Home / ತಾಲ್ಲೂಕು / 203 ವಿದ್ಯಾರ್ಥಿಗಳು ಗೈರಾಗುವ ಮೂಲಕ 5991 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಹಾಜರಾಗಿದ್ದಾರೆ.

203 ವಿದ್ಯಾರ್ಥಿಗಳು ಗೈರಾಗುವ ಮೂಲಕ 5991 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಹಾಜರಾಗಿದ್ದಾರೆ.

Spread the love

ಮೂಡಲಗಿ: ತಾಲೂಕಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 6194 ರ ಪೈಕಿ 203 ವಿದ್ಯಾರ್ಥಿಗಳು ಗೈರಾಗುವ ಮೂಲಕ 5991 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಮಂಡಳಿಯ ನಿಯಮಾನುಸಾರ ಪರೀಕ್ಷೆಗಳು ಯಶಸ್ವಿಯಾಗಿ ಜರುಗಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಡಲಗಿ ವಲಯದಲ್ಲಿ 18 ಕೇಂದ್ರಗಳು 6 ಉಪಕೇಂದ್ರಗಳಲ್ಲಿ ಜೂನ್-2020 ರ ಮೊದಲ ದಿನದ ಪರೀಕ್ಷೆಯು ಸುವ್ಯವಸ್ಥಿತ ರೀತಿಯಲ್ಲಿ ಜರುಗಿದವು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್‍ಆರ್‍ಟಿಸಿವತಿಯಿಂದ 33, ಖಾಸಗಿ ಶಾಲೆಗಳಿಂದ 49 ವಾಹನಗಳಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ಕೇಂದ್ರಗಳಿಗೂ ಆತೋಗ್ಯಸಹಾಯಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿ, ಸ್ಕೌಟ್ & ಗೈಡ್ಸ್, ಸೇವಾದಳ ಸಿಬ್ಬಂದಿಗಳು ಪರೀಕ್ಷರಗಳು ಸುಗಮವಾಗಿ ಸಾಗಲು ಸಹಕರಿಸಿದರು. 144 ಕಲಂ ಜಾರಿ ಇರುವದರಿಂದ ಮುಂಜಾಗೃತ ಕ್ರಮವಾಗಿ ಅಗತ್ಯ ಬಂದೂ ಬಸ್ತ ಒದಗಿಸಲಾಗಿದೆ. ಪರೀಕ್ಷಾರ್ಥಿಗಳು ತಮಗೆ ಬೇಕಾದ ಕುಡಿಯುವ ನೀರು, ಊಟೋಪಚಾರಗಳಂತಹ ಅಗತ್ಯತೆಗಳನ್ನು ಜೊತೆಗೆ ತಂದಿದ್ದರು. ಸ್ಕ್ರೀನಿಂಗ್, ಸ್ಯಾನಿಟರ್, ಮಾಸ್ಕ್ ಧರಿಸುವದನ್ನು ಕಡ್ಡಾಯಗೊಳಿಸುವ ಮೂಲಕ ಯಶಸ್ವಿಗೊಳಿಸಲಾಯಿತು ಎಂದು ಹೇಳಿದರು.

ಜಿಲ್ಲಾಧಿಕಾರಿಗಳಿಂದ ನೇಮಕಗೊಂಡ ತಾಲೂಕಿನ ನಿಯೋಜಿತ ಅಧಿಕಾರಿಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬೇಟಿ ನೀಡಿದರು ತಾಪಂ ಇಒ ಬಸವರಾಜ ಹೆಗ್ಗನಾಯಕ ಕುಲಗೋಡದ ಎನ್ ಎಸ್ ಎಫ್ ಪ್ರೌಢ ಶಾಲೆ, ಜಿಎಚ್‍ಎಸ್ ವಡೇರಹಟ್ಟಿ, ಎಸ್.ಡಿಪಿ ಅರಭಾಂವಿಮಠ, ಸಿಡಿಪಿಒ ಕೆಎಚ್‍ಎಸ್ ಜಿಎಚ್‍ಎಸ್ ಮೂಡಲಗಿ, ಬಿಇಒ ಎ.ಸಿ ಮನ್ನಿಕೇರಿ ಕಲ್ಲೋಳ್ಳಿ, ನಾಗನೂರ, ಮೂಡಲಗಿ, ತುಕ್ಕಾನಟ್ಟಿ, ಮಲ್ಲಾಪೂರ ಪಿಜಿ,ಅರಭಾಂವಿಮಠ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಯ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಂಡರು.

ಪರೀಕ್ಷೆ ಪ್ರಾರಂಭದ ಮೊದಲು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಬೆಟ್ಟಿ ನೀಡಿ ವಿದ್ಯಾರ್ಥಿಗಳಿಗೆ,ಪಾಲಕರಿಗೆ ಕರೋನಾ ಮತ್ತು ಪರೀಕ್ಷಾ ಭಯ ನಿವಾರಣಾ ನಿಟ್ಟಿನಲ್ಲಿ ಧೈರ್ಯ ನೀಡಿದರು.

ಈ ಸಂದರ್ಭದಲ್ಲಿ ಪರೀಕ್ಷಾ ನೋಡಲ್ ಅಧಿಕಾರಿ ಬಿ.ಎಸ್ ಸತೀಶ, ಇಸಿಒ ಟಿ ಕರಿಬಸವರಾಜು, ಪರೀಕ್ಷಾ ಅಧಿಕ್ಷಕರಾದ ಗೀತಾ ಕರಗಣ್ಣಿ, ಬಿ.ಎಸ್ ನ್ಯಾಮಗೌಡ, ಶೇಗುಣಸಿ, ಬಿ.ಆರ್.ಪಿಗಳಾದ ಜಿ ಆರ್ ಪತ್ತಾರ, ಐ.ಎಸ್ ಬಡಿಗೇರ, ಎಮ್ ಎಸ್ ಕೊಣ್ಣೋರೆ, ಸಿ.ಆರ್.ಪಿ ಸಮೀರ ದಬಾಡಿ, ಕೆ.ಎಲ್ ಮೀಶಿ, ಸಿ ಬಿ ಪುಜೇರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ