ಲಕ್ಷ್ಮೀದೇವಿ ಬೆಟಗೇರಿ ಗ್ರಾಮದ ಅದಿದೇವತೆ : ರಾಮಣ್ಣ ಬಳಿಗಾರ
ಬೆಟಗೇರಿ:ಇಂದು ದಿನದಿಂದ ದಿನಕ್ಕೆ ಹಳ್ಳಿಗಳಲ್ಲಿ ಕಲೆ, ಸಂಸ್ಕøತಿ, ಸಂಪ್ರದಾಯ, ಹಬ್ಬ-ಹರಿದಿನಗಳು, ಧಾರ್ಮಿಕ ಆಚರಣೆಗಳು ಮರೆಯಾಗುತ್ತಿವೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಸಮಿತಿ ಸಂಚಾಲಕ ರಾಮಣ್ಣ ಬಳಿಗಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶುಕ್ರವಾರ ನ.17 ರಂದು ಆಯೋಜಿಸಿದ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಆಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಶ್ರೀಲಕ್ಷ್ಮೀದೇವಿ ಬೆಟಗೇರಿ ಗ್ರಾಮದ ಅದಿದೇವತೆಯಾಗಿದ್ದಾಳೆ. ಹಬ್ಬ-ಹರಿದಿನ, ಜಾತ್ರಾ ಮಹೋತ್ಸವಗಳು ನಾಡಿನ ಸಂಸ್ಕøತಿ, ಸಂಪ್ರದಾಯದ ಪ್ರತೀಕವಾಗಿವೆ. ಪ್ರತಿಯೊಬ್ಬರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ದೇವರ ಕೃಪಾರ್ಶೀವಾದಕ್ಕೆ ಪಾತ್ರರಾಗಬೇಕೆಂದರು.
ಈರಯ್ಯ ಹಿರೇಮಠ ದಿವ್ಯ ಸಾನಿಧ್ಯ, ಸಂಗಯ್ಯ ಹಿರೇಮಠ, ವಿಜಯ ಹಿರೇಮಠ ಸಮ್ಮುಖ ವಹಿಸಿ ದೀಪೋತ್ಸವ ಕಾರ್ಯಕ್ರಮ ನೆರವೇರಿಸಿದರು.
ನ.16ರಂದು ಬೆಳಗ್ಗೆ, ಸಂಜೆ 6 ಗಂಟೆಗೆ ಶ್ರೀಲಕ್ಷ್ಮೀದೇವಿಯ ಗದ್ಗುಗೆಗೆ ಪೂಜೆ, ಅಭಿಷೇಕ, ನೈವೇದ್ಯ ಸಮರ್ಪಿಸುವ, ರಾತ್ರಿ 8 ಗಂಟೆಗೆ ದೀಪೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ನ.17ರಂದು ಬೆಳಗ್ಗೆ 8 ಗಂಟೆಗೆ ಶ್ರೀಲಕ್ಷ್ಮೀದೇವಿ ದೇವರ ಗದ್ಗುಗೆಗೆ ಮಹಾಪೂಜೆ, ಮಹಾಭಿಷೇಕ, ನೈವೇದ್ಯ, ದೇವಿಯ ಆರಾಧನೆ, ಸುಮಂಗಲೆಯರಿಂದ ಶ್ರೀದೇವಿಗೆ ಉಡಿ ತುಂಬುವುದು, ವಿಶೇಷ ಪೂಜೆ, ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುರ ಜನರಿಂದ ಸಂಭ್ರಮದಿಂದ ನಡೆದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು. ಮಹಾಪ್ರಸಾದದೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಂಡಿತು.
ಸಂಜು ಪೂಜೇರ, ಮುತ್ತೆಪ್ಪ ವಡೇರ, ಲಕ್ಷ್ಮಣ ಚಂದರಗಿ, ಮುತ್ತೆಪ್ಪ ಮಾಕಾಳಿ, ಭರಮಣ್ಣ ಪೂಜೇರ ಕೆಂಪಣ್ಣ ಪೇದನ್ನವರ, ವಿಠಲ ಚಂದರಗಿ, ಬಸವರಾಜ ಪಣದಿ, ಚಂದ್ರಶೇಖರ ನೀಲಣ್ಣವರ, ನಿಂಗಪ್ಪ ಪೂಜೇರ, ಗಿರೀಶ ಗಾಣಗಿ, ಯಲ್ಲಪ್ಪ ಬಾಣಸಿ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ಜಾತ್ರಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಗ್ರಾಮಸ್ಥರು ಇದ್ದರು.